ಕನ್ನಡಪ್ರಭ ವಾರ್ತೆ, ಬೈಲುಕುಪ್ಪೆ, ಮಾ.29
ಇಲ್ಲಿನ ಒಂದನೇ ಕ್ಯಾಂಪ್ ರಸ್ತೆಯಲ್ಲಿರುವ ಟ್ರಾನ್ಸ್ಫಾರ್ಮರ್ ಸುಟ್ಟು ಮೂರು ದಿನ ಕಳೆದಿದ್ದು, ವಿದ್ಯುತ್ ಇಲ್ಲದೆ ಮತ್ತು ನೀರಿಗೆ ಹಾಹಾಕಾರ ಉಂಟಾಗಿದೆ.
ಸ್ಥಳೀಯರು ಸೆಸ್ಕ್ ಎಂಜಿನಿಯರ್ ಕೆ. ಬಸವರಾಜ್ ದೂರು ನೀಡಿದ್ದು, ಟ್ರಾನ್ಸ್ಫಾರ್ಮರ್ ದುರಸ್ತಿಗೊಳಿಸಲು ಇನ್ನು ಮೂರ್ನಾಲ್ಕು ದಿನ ಆಗವುದು ಎಂದು ತಿಳಿಸಿದ್ದಾರೆ.
ಪಿರಿಯಾಪಟ್ಟಣದ ಸೆಸ್ಕ್ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿರುವುದಾಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಯೋಗಿ ಹೇಳಿದ್ದಾರೆ. ಒಂದನೇ ಕ್ಯಾಂಪ್ ನಿವಾಸಿಗಳು ನಮ್ಮ ಗೋಳನ್ನು ಕೇಳುವವರು ಯಾರು ಎಂದು ಪ್ರಶ್ನಿಸಿದ್ದು, ಕೂಡಲೆ ಟ್ರಾನ್ಸ್ಫಾರ್ಮರ್ಅನ್ನು ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದು, ಒಂದೆರಡುದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿ, ಪಂಚಾಯಿತಿ ಕಚೇರಿಗೆ ಬೀಗ ಹಾಕುವುದಾಗಿ ಎಚ್ಚರಿಸಿದ್ದಾರೆ.