ಯೂರಿಯಾ ಮಿಶ್ರಿತ ರೇಷನ್ ಅಕ್ಕಿ: ಕೆಲವರು ಅಸ್ವಸ್ಥ

Updated on: 

ಕನ್ನಡಪ್ರಭ ವಾರ್ತೆ ತಾಳಿಕೋಟೆ  ಮಾ.29
ಆಹಾರ ಇಲಾಖೆಯಿಂದ ವಿತರಿಸಲಾದ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ ಮಿಶ್ರಿತವಾಗಿದ್ದು, ಇದನ್ನು ತಿಳಿಯದೇ ಅನ್ನ ಮಾಡಿ ಸೇವಿಸಿದ ಸಮೀಪದ ಗೋಟಖಂಡ್ಕಿ ಗ್ರಾಮಸ್ಥರು ಅಸ್ವಸ್ಥರಾಗಿದ್ದು, ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸಲು ತಾಳಿಕೋಟೆಯ ಸರ್ಕಾರಿ ಗೋದಾಮಿನಿಂದ ಆಹಾರ ಧಾನ್ಯಗಳನ್ನು ತಂದು, ಕಳೆದೆರಡು ದಿನಗಳಿಂದ ಗ್ರಾಮದಲ್ಲಿ ರೇಷನ್ ವಿತರಿಸಲಾಗುತ್ತಿತ್ತು. ಈ ಅಕ್ಕಿಯಲ್ಲಿ ತಯಾರಿಸಿ ಅನ್ನ ಊಟ ಮಾಡಿದ ಕೆಲವರಿಗೆ ಗುರುವಾರ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ಕೆಲ ಚಿಕ್ಕ ಮಕ್ಕಳು, ವೃದ್ಧರು ವಾಂತಿ, ಭೇದಿಯಿಂದ ಬಳಲಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಅದಕ್ಕೆ ಕಾರಣವೇನೆಂದು ತಿಳಿದಿರಲಿಲ್ಲ. ಶುಕ್ರವಾರ ಈ ಅಕ್ಕಿಯನ್ನು ಸ್ವಚ್ಛಗೊಳಿಸುವಾಗ ಅಕ್ಕಿಯ ಜತೆ ಯೂರಿಯಾ ರಸಗೊಬ್ಬರ ಮಿಶ್ರಣವಾಗಿದ್ದು ಗ್ರಾಮದ ಮಹಿಳೆಯರಿಗೆ ಗೋಚರಿಸಿದೆ. ಬಳಿಕ ಗ್ರಾಮಸ್ಥರು ತಮ್ಮ ತಮ್ಮ ಮನೆಯ ಅಕ್ಕಿಯನ್ನು ಪರಿಶೀಲಿಸಿದರು. ಎಲ್ಲದರಲ್ಲಿಯೂ ಗೊಬ್ಬರ ಸೇರಿರುವುದು ಪತ್ತೆಯಾಗಿದೆ.
ಬಳಿಕ ಗ್ರಾಮಸ್ಥರೆಲ್ಲ ಗೋದಾಮಿಗೆ ತೆರಳಿ ಅಕ್ಕಿಯನ್ನು ಪರಿಶೀಲಿಸಿದರು. ಬಹುತೇಕ ಅಕ್ಕಿ ಚೀಲಗಳಲ್ಲಿ ಗೊಬ್ಬರ ಮಿಶ್ರಣವಾಗಿದ್ದು ಕಂಡು ಬಂದಿತಲ್ಲದೇ, ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳಿಗೂ ವಿಷಯ ತಿಳಿಸಲಾಯಿತು. ಸ್ಥಳಕ್ಕಾಗಮಿಸಿದ ಆಹಾರ ಇಲಾಖೆಯ ಶಿರಸ್ತೆದಾರ ವಾಯ್.ಕೆ.ಮಾದರ ಮತ್ತಿತರರು ಅಕ್ಕಿಯನ್ನು ಪರಿಶೀಲಿಸಿದರು. ಈ ಅಕ್ಕಿಯನ್ನು ಮರಳಿಸಿ ಹೊಸ ಅಕ್ಕಿ ವಿತರಿಸುವುದಾಗಿ ಭರವಸೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com