ಹಕ್ಕಿನ ಜತೆ ಜವಾಬ್ದಾರಿ ಅರಿತುಕೊಳ್ಳಿ ಕಾನೂನು ಅರಿವು ಶಿಬಿರದಲ್ಲಿ ಹೈಕೋರ್ಟ್ ನ್ಯಾ. ಎನ್. ಕುಮಾರ್ ಸಲಹೆ

Updated on: 

ಕ.ಪ್ರ. ವಾರ್ತೆ ್ಣ ಹುಣಸೂರು ್ಣ ಮಾ.29
ಹಕ್ಕು ಮತ್ತು ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪ್ರಜೆಗಳು ಹಕ್ಕಿನ ಜತೆ ತಮ್ಮ ಜವಾಬ್ದಾರಿಯನ್ನೂ ಅರಿತು ಕಾರ್ಯನಿರ್ವಹಿಸಿದಾಗ ಮಾತ್ರ ನೆಮ್ಮದಿಯ ಜೀವನ ಸಾಧ್ಯ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕುಮಾರ್ ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜಕ ಇಲಾಖೆ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ  ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಒಂದು ದಿನದ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನನ್ನು ಸಂಪೂರ್ಣವಾಗಿ ಅರಿತವರಿಲ್ಲ.
ಎಲ್ಲವನ್ನೂ ತಿಳಿದುಕೊಳ್ಳುವ ಅವಶ್ಯಕತೆಯೂ ಇಲ್ಲ. ಆದರೆ ಸುಖಿ ಸಮಾಜದ ಪರಿಕಲ್ಪನೆಗೆ ಅಗತ್ಯ ವಿರುವಷ್ಟು ಕಾನೂನನ್ನು ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.
ಇಂದಿನ ಸಮಾಜದಲ್ಲಿ ಪ್ರಮುಖವಾಗಿ ಹೆಣ್ಣುಮಕ್ಕಳ ಮದುವೆ ಮತ್ತು ಆಸ್ತಿಯ ಕುರಿತಾಗಿನ ಕಾನೂನು ಕಟ್ಟಳೆಗಳು ಬಹಳಷ್ಟು ನಾಗರಿಕರಿಗೆ ತಿಳಿದಿಲ್ಲ. ನಮ್ಮ ದೇಶ ಪುರುಷ ಪ್ರಧಾನ ಸಮಾಜವಾಗಿರುವ ಕಾರಣಕ್ಕೆ ಮಹಿಳೆ ಅತಿಹೆಚ್ಚು ವಂಚನೆಗೊಳಗಾಗುತ್ತಿದ್ದಾಳೆ.
ಇತ್ತೀಚೆಗೆ ಹೆಣ್ಣು ಮಕ್ಕಳ ಆಸ್ತಿ ಹಕ್ಕು ಕಾನೂನು ಜಾರಿಗೆ ಬಂದಿದ್ದರೂ ಪೂರ್ಣ ತಿಳಿವಳಿಕೆ ಇಲ್ಲದೆ ವಿಫಲವಾಗುತ್ತಿದೆ. ಅಂತೆಯೇ ವಿಚ್ಚೇದನೆ ಕೂಡ ಜಾಸ್ತಿಯಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮೋಹನ ಶ್ರೀಪಾದ ಸಂಕೊಳ್ಳಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಯೋಗಾನಂದ ಕುಮಾರ್, ನಾಟಿ ವೈದ್ಯೆ ಮಾಸ್ತಮ್ಮ, ಸಮಾಜ ಸೇವಕಿ ವಿಜಯ ಕರೀಗೌಡ, ನ್ಯಾಯಾಧೀಶರಾದ ಎಸ್.ಎಲ್. ಪಾಟೀಲ್, ಬಿ.ಎಂ. ಶೈಲಾ, ಎಸ್.ವಿ. ಶ್ರೀಕಾಂತ್, ಟಿ.ಎಂ. ನಿವೇದಿತಾ, ಡಿವೈಎಸ್ಪಿ ಮುದ್ದುಮಹದೇವಯ್ಯ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com