ಕ.ಪ್ರ. ವಾರ್ತೆ ್ಣ ಹುಣಸೂರು ್ಣ ಮಾ.29
ಶುಂಠಿ ಹೊಲಕ್ಕೆ ಸಿಂಪಡಿಸಲು ಸಿದ್ದಪಡಿಸಿದ್ದ ಕಳೆನಾಶಕ ಔಷಧ ಸೇವಿಸಿ ಮೂರು ಹಸುಗಳು ಮೃತಪಟ್ಟಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಬಿ.ಆರ್. ಕಾವಲ್ ಮೂರನೇ ಕಾಲೋನಿಯ ವೆಂಕಟೇಶ್ ಮತ್ತು ಮಹೇಶ್ ಎಂಬವರಿಗೆ ಸೇರಿದ 75 ಸಾವಿರ ಮೌಲ್ಯದ ಮೂರು ಹಸುಗಳನ್ನು ಮೇಯಲು ಬಿಟ್ಟಿದ್ದರು. ಪಕ್ಕದ ಜಮೀನಿನ ಮಾಲೀಕ ಕುಮಾರ್ ಎಂಬವರು ಶುಂಠಿ ಬೆಳೆ ಕಳೆ ನಾಶಕಕ್ಕೆ ಸಿಂಪಡಿಸಲು ಸಂಗ್ರಹಿಸಿದ್ದ ಡ್ರಂನಲ್ಲಿದ್ದ ನೀರನ್ನು ಈ ಹಸುಗಳು ಕುಡಿದು ಮೃತಪಟ್ಟಿವೆ.
ಜಮೀನಿನ ಮಾಲೀಕ ಹಸುಗಳ ಮಾಲೀಕರಿಗೆ 25 ಸಾವಿರ ಪರಿಹಾರ ರೂಪದಲ್ಲಿ ನೀಡಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ನೇರಳಕುಪ್ಪೆ ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಂದರಮ್ಮ ಮಹದೇವ್ ಒತ್ತಾಯಿಸಿದ್ದಾರೆ.