ಕ.ಪ್ರ. ವಾರ್ತೆ ್ಣ ಪಿರಿಯಾಪಟ್ಟಣ, ಮಾ.29
ಗುರುವಾರವಷ್ಟೆ ಕಾಂಗ್ರೆಸ್ ಪಕ್ಷ ತೊರೆದು ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಜಿಪಂ ಮಾಜಿ ಸದಸ್ಯ ಹಾಗೂ ಹಾಲಿ ಎಪಿಎಂಸಿ ಸದಸ್ಯ ಎಸ್.ಟಿ. ರಾಜಶೇಖರ್ ಶುಕ್ರವಾರ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ದುಡುಕಿನ ತೀರ್ಮಾನದಿಂದಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕಾಯಿತು. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದ್ದರೆ ತಮ್ಮನ್ನು ಕ್ಷಮಿಸುವಂತೆ ಕೇಳಿದ ಎಸ್.ಟಿ. ರಾಜಶೇಖರ್ ತಮ್ಮ ಸಂಬಂಧಿಗಳು ಹಾಗೂ ಕೆಲವು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಸ್ನೇಹಿತರು ತಾವು ಕಾಂಗ್ರೆಸ್ ತೊರೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಹಾಗೂ ಶಾಸಕರ ಬಗ್ಗೆ ತಮಗೆ ಇಂದಿಗೂ ಗೌರವವಿರುವ ಕಾರಣ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿರುವುದಾಗಿ ತಿಳಿಸಿದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಪುಟ್ಟರಾಜು, ಜಿಪಂ ಮಾಜಿ ಸದಸ್ಯ ಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್ಚಂದ್ರು, ಪ್ರಧಾನ ಕಾರ್ಯದರ್ಶಿ ನೀಲಂಗಾಲ ಜಯಣ್ಣ, ಕಾರ್ಯದರ್ಶಿ ವೆಂಕಟೇಶ್, ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಹಮ್ಮದ್ ಶಫಿ, ಕಾರ್ಯಕರ್ತರಾದ ಬಿ.ಜೆ. ಬಸವರಾಜ್, ಜಮೃದ್, ಪಾಲಾಕ್ಷ, ಪೆಪ್ಸಿ ಕುಮಾರ್, ಪಿ.ಆರ್. ಮಹದೇವ್, ನಾಗಣ್ಣ, ದೀಪಕ್, ಗಿರೀಶ್ ಇದ್ದರು.