ಮೈಸೂರು: ಮನೆಗೆ ನುಗ್ಗಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಇಬ್ಬರು ವ್ಯಕ್ತಿಗೆ ನ್ಯಾಯಾಲಯವು 1 ವರ್ಷ 8 ತಿಂಗಳು ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಂಡಿ ಮೊಹಲ್ಲಾ ಉಮಾರ್ ಖಯಾಂ ರಸ್ತೆ ನಿವಾಸಿ ರಫೀಕ್ ಎಂಬವರ ಪುತ್ರ ಸಿದ್ದಿಕ್ ಅಹಮ್ಮದ್ (22) ಮತ್ತು ಸನಾವುಲ್ಲಾ ಎಂಬವರ ಪುತ್ರ ಪಿರ್ದೋಶ್ ಪಾಷ (24) ಶಿಕ್ಷೆಗೆ ಗುರಿಯಾದವರು. ಈ ಇಬ್ಬರು 2008ರ ಸೆ.6 ರಂದು ಉಮಾರ್ ಖಯಾಂ ರಸ್ತೆಯಲ್ಲಿರುವ ಮೊಹಮ್ಮದ್ ಹುಸೇನ್ ಮತ್ತು ಎಂ. ಸಾಜೀದಾ ಎಂಬವರ ಮನೆಗೆ ನುಗ್ಗಿ, 2 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು ಮಾಡಿ ಸಿಕ್ಕಿಬಿದ್ದಿದ್ದರು.