ಮೈಸೂರು: ನೆಲದನಿ ಸಾಂಸ್ಕೃತಿಕ ಸಂಸ್ಥೆಯು ಚಿಂತಕ ಹಾಗೂ ಪತ್ರಕರ್ತ ಪಿ. ಲಂಕೇಶ್ ಒಂದು ನೆನಪು ಕಾರ್ಯಕ್ರಮವನ್ನು ಮೇ 11ರ ಬೆಳಗ್ಗೆ 10ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದೆ. ವಿಚಾರವಾದಿ ಪ್ರೊ. ಎಚ್.ಎಲ್. ಕೇಶವಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮತಾ ವೇದಿಕೆ ಅಧ್ಯಕ್ಷೆ ಮೀರಾನಾಯಕ್ ಅಧ್ಯಕ್ಷತೆ ವಹಿಸುವರು. ಲಂಕೇಶ್ ಒಡನಾಡಿ ಬಿ.ಎನ್. ಶ್ರೀರಾಮ್, ಸಾಹಿತಿ ಡಾ.ಹಾಲತಿ ಸೋಮಶೇಖರ್, ಪತ್ರಕರ್ತ ಮಂಜುನಾಥ ಲತಾ, ಸಂಸ್ಥೆ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸ್ಪಂದನ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.