ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 10
ದೇಶಾದ್ಯಂತ ಕೆಮಿಸ್ಟ್ ಬಾಂಧವರು ಒಂದು ದಿನದ ಔಷಧ ವ್ಯಾಪಾರ ಬಂದ್ ಮಾಡಿರುವುದಕ್ಕೆ ಬೆಂಬಲ ಸೂಚಿಸಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಶುಕ್ರವಾರ ವಹಿವಾಟು ಸ್ಥಗಿತಗೊಳಿಸಿ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿ ಶಿರಸ್ತೇದಾರರಿಗೆ ಮನವಿ ಸಲ್ಲಿಸಲಾಯಿತು.
20 ವರ್ಷಗಳ ಹಿಂದೆ ಔಷಧ ವ್ಯಾಪಾರಿಗಳ ಲಾಭಾಂಶ ಕಡಿತಗೊಳಿಸುವ ತಿದ್ದುಪಡಿಗೆ ಮತ್ತೆ ಕಡಿತ ಮಾಡದೆ ಈಗಿನ ಪ್ರಕಾರವೇ ಮುಂದುವರಿಸಬೇಕು. ವ್ಯಾಪಾರಿಗಳಿಗೆ ಫಾರ್ಮಸಿಸ್ಟ್ ಔಷಧ ತಜ್ಞರ ಕೊರತೆ ನೀಗಿಸಲು ವ್ಯಾಪಾರ ನಡೆಸುವ ಮಾಲೀಕನಿಗೆ ಔಷಧ ಮತ್ತು ಕಾಂತಿವರ್ಧಕ ಕಾಯ್ದೆಯಲ್ಲಿ ಔಷಧ ಮಾರಾಟಕ್ಕೆ ಮನ್ನಣೆ ನೀಡುವುದು ಮತ್ತು ಔಷಧ ವಹಿವಾಟನ್ನು ವಿದೇಶಿ ಹಣ ಹೂಡಿಕೆಯಿಂದ ಮುಕ್ತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಾಲೀಕರ ಸಂಘದ ವತಿಯಿಂದ ಅರ್ಧ ಗಂಟೆ ಕಾಲ ಮಿನಿ ವಿಧಾನಸೌಧದ ಮುಂದೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಲಾಯಿತು.
ತಾಲೂಕು ಅಧ್ಯಕ್ಷ ಸಿ.ವಿ. ಮೋಹನ್ಕುಮಾರ್, ಜಿಲ್ಲಾ ನಿರ್ದೇಶಕ ಬಿ.ಎ. ನಾಗರಾಜು, ಖಜಾಂಚಿ ಡಿ.ಸಿ. ಹರೀಶ್, ಸದಸ್ಯರಾದ ನಾಗೇಂದ್ರ, ರವಿ, ಮುರಳಿ, ಗಿರೀಶ್, ಇಲಿಯಾಸ್, ಶ್ರೀನಿವಾಸ, ಹರೀಶ್, ಮಹೇಂದ್ರ, ರವಿಕುಮಾರ್, ಹರೀಶ್, ಗಣೇಶ್, ಶ್ರೀನಿವಾಸ್ ಇದ್ದರು.