ವಿಜೃಂಭಣೆಯ ರಥೋತ್ಸವ

Updated on: 

ರಾವಂದೂರು: ತಾಲೂಕಿನ ರಾವಂದೂರಿನ ಇತಿಹಾಸ ಪ್ರಸಿದ್ಧ ದೊಡ್ಡಮ್ಮತಾಯಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ರಾವಂದೂರಿನ ಜಾತ್ರಾ ಮಹೋತ್ಸವವು ರಾವಂದೂರು, ಆರ್.ಡಿ. ಕೊಪ್ಪಲು, ಆರ್.ಎಸ್. ಕೊಪ್ಪಲು, ಕೋಡಿಹಳ್ಳಿ, ತೋಳ್ಕಲ್ ಕಾಲೋನಿ ಗ್ರಾಮಗಳ ಏಳು ಕೋಮುಗಳ ಸಹಯೋಗದಲ್ಲಿ ನಡೆಯುವುದು ಹಿಂದಿನಿಂದ ನಡೆದು ಬಂದ ಸಂಪ್ರದಾಯವಾಗಿದೆ.
ರಾವಂದೂರು ದೊಡ್ಡಮ್ಮತಾಯಿಯ ಭಕ್ತರು ಬೆಂಗಳೂರು, ಮೈಸೂರು, ಕೆ.ಆರ್. ನಗರ, ಹುಣಸೂರು, ಎಚ್.ಡಿ. ಕೋಟೆ, ಪಿರಿಯಾಪಟ್ಟಣ ಹಾಗೂ ಇನ್ನಿತರೆ ಕಡೆಗಳಲ್ಲಿ ನೆಲೆಸಿದ್ದು, ಈ ಎರಡು ದಿನಗಳಂದು ದೊಡ್ಡಮ್ಮತಾಯಿಯ ಭಕ್ತರು ಇಲ್ಲಿ ಜಾತಿ ಮತ ಭೇದವಿಲ್ಲದೆ ಪೂಜಿಸಿ ಪುನಿತರಾಗುತ್ತಾರೆ.
ಏಳು ಕೋಮುಗಳಲ್ಲಿ ಪ್ರತಿ ಕೋಮಿಗೂ ಯಜಮಾನರಿದ್ದು ರಥೋತ್ಸವ, ಜಾತ್ರಾ ಮಹೋತ್ಸವ, ಕೊಂಡೋತ್ಸವ ಮುಂತಾದ ಪೂಜಾ ವಿಧಿವಿಧಾನಗಳನ್ನು ಎಲ್ಲ ಕೋಮಿನ ಮಂದಿ ಒಂದೇ ಮನೆಯವರಂತೆ ಪೂಜಿಸುವುದು ಈ ದೇವರ ವಿಶೇಷವಾಗಿದೆ. ಚುಂಚನಕಟ್ಟೆ ಹೊಳೆಗೆ ಮೆರವಣಿಗೆಯಲ್ಲಿ ಹೊತ್ತೊಯ್ದು ಅಲ್ಲಿಂದ ದೇವರನ್ನು ಹೊತ್ತು ತಂದು ನಂತರ ದೇವರನ್ನು ಪೂಜಾ ವಿಧಿ ವಿಧಾನಗಳಲ್ಲಿ ತೊಡಗಿಸುವುದು ಮೊದಲಿನಿಂದಲೂ ನಡೆದು ಬಂದಿದೆ.
ಇದರಂತೆ ಶುಕ್ರವಾರ ಬೆಳಗ್ಗೆ ರಾವಂದೂರು ಗ್ರಾಮದ ದೇವಾಲಯದಿಂದ ಮೂರ್ತಿಯನ್ನು ಎಸ್. ಕೊಪ್ಪಲಿನ ಮುದ್ದಪ್ಪನವರ ತೋಟದಲ್ಲಿ ವಿಶೇಷ ಪೂಜೆ, ಹೋಮ ಹವನಗಳನ್ನು ಸಲ್ಲಿಸಿ ನಂತರ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆಯೊಂದಿಗೆ ರಥೋತ್ಸವ ನಡೆಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com