14 ರಂದು ಸೆಸ್ಕ್ ಕಚೇರಿ ಎದುರು ಧರಣಿ

Updated on: 

ಕ.ಪ್ರ.ವಾರ್ತೆ  ಹುಣಸೂರು  ಮೇ 11
ಗ್ರಾಹಕರ ಮತ್ತು ಗುತ್ತಿಗೆದಾರರ ಹಿತ ಕಾಪಾಡುವಲ್ಲಿ ಸೆಸ್ಕ್ ವಿಫಲವಾಗಿರುವುದನ್ನು ಖಂಡಿಸಿ ಮೇ 14 ರಂದು ಧರಣಿ ನಡೆಸುವುದಾಗಿ ಎಂದು ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಕೆ. ವೃಷಬೇಂದ್ರ ಹೇಳಿದ್ದಾರೆ.
ವ್ಯಾಪ್ತಿಗೆ ಒಳಪಡುವ ಸೆಸ್ಕ್ ಕಚೇರಿಯಲ್ಲಿ ಹೊಸದಾಗಿ ಅಳವಡಿಸಿರುವ ಇನ್ಫೋಸಿಸ್‌ನ ವ್ಯಾಮ್ಸ್‌ನಿಂದ ತೊಂದರೆಯಾಗುತ್ತಿರುವುದರಿಂದ ಹೊಸದಾಗಿ ನೋಂದಣಿ, ಹೆಚ್ಚುವರಿ ವಿದ್ಯುತ್ ಮತ್ತು ಖಾತೆ ಬದಲಾವಣೆ ಕಳೆದ ನಾಲ್ಕು ತಿಂಗಳಿನಿಂದ ವಿಳಂಬವಾಗುತ್ತಿದೆ.
ಗ್ರಾಹಕರು ಮತ್ತು ಗುತ್ತಿಗೆದಾರರ ನಡುವೆ ಪ್ರತಿನಿತ್ಯ ಕಲಹ ಉಂಟಾಗುತ್ತಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಗುತ್ತಿಗೆದಾರರು ಅಂದು ಬೆಳಿಗ್ಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com