ಮೈಸೂರು: ತುಂಬಾ ನಿತ್ರಾಣರಾಗಿ ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ರಾಜು ಎಂಬವರ ಪತ್ನಿ ಲಕ್ಷ್ಮಿ (40) ಮೃತಪಟ್ಟಿದ್ದಾರೆ. ಇವರ ವಿಳಾಸ ತಿಳಿದು ಬಂದಿಲ್ಲ. ಚಹರೆ- 5.3 ಅಡಿ ಎತ್ತರ, ಗೋದಿ ಮೈಬಣ್ಣ, ಗುಂಡು ಮುಖ, ಸಾಧಾರಣ ಮೈಕಟ್ಟು, ಬಿಳಿ ಮತ್ತು ಕೇಸರಿ ಬಣ್ಣದ ಸೀರೆ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.