ಮೈಸೂರು: ಮೈಸೂರು ತಾಲೂಕು ಜಯಪುರ ಹೋಬಳಿ ಮಾವಿನಹಳ್ಳಿ ನಿವಾಸಿ ಕರೀಶೆಟ್ಟಿ ಎಂಬವರ ಪುತ್ರಿ ಕೆ. ಕಾವ್ಯ (19) ನಾಪತ್ತೆಯಾಗಿದ್ದಾರೆ.
ಇವರು ಎಸ್ಸೆಸ್ಸೆಲ್ಸಿ ಓದಿದ್ದು, ಮೈಸೂರಿನ ಜನತಾನಗರದ 11ನೇ ಕ್ರಾಸ್ನಲ್ಲಿರುವ ಅಜ್ಜಿ ಗೌರಮ್ಮ ಮನೆಗೆ ಎರಡು ತಿಂಗಳ ಹಿಂದೆ ಬಂದಿದ್ದಾರೆ.
ಅಜ್ಜಿಗೆ ಅನಾರೋಗ್ಯವಾಗಿದ್ದ ಕಾರಣ ಇಲ್ಲೇ ಉಳಿದುಕೊಂಡು, ಅಜ್ಜಿಯ ಆರೈಕೆಯಲ್ಲಿ ತೊಡಗಿದ್ದರು. ಮೇ 4 ರಂದು ಮಾವಿನಹಳ್ಳಿಗೆ ಹೋಗುವುದಾಗಿ ಹೊರಟ ಕಾವ್ಯ ಕಾಣೆಯಾಗಿದ್ದಾರೆ. ಚಹರೆ-5.1 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಪೊಲೀಸರು ಕೋರಿದ್ದಾರೆ.