ಪಿರಿಯಾಪಟ್ಟಣ: ವಿದ್ಯುತ್ ತಂತಿಯನ್ನು ಮರಕ್ಕೆ ಕಟ್ಟಲು ಹೋಗಿ, ವಿದ್ಯುತ್ ಸ್ಪರ್ಶದಿಂದ ವ್ಯಕ್ತಿಯೊರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕಣಗಾಲು ಬಸವನಹಳ್ಳಿ ಗ್ರಾಮದಲ್ಲಿ ಜರುಗಿದೆ. ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ಪ್ರತಾಪ್ (35) ಮೃತಪಟ್ಟ ವ್ಯಕ್ತಿ. ಪ್ರತಾಪ್ ಕಣಗಾಲು ಬಸವನಹಳ್ಳಿ ಗ್ರಾಮದ ತನ್ನ ತಂಗಿಯ ಜಮೀನು ಕೆಲಸದಲ್ಲಿ ಸಹಕರಿಸುತ್ತಿದ್ದ. ಶುಕ್ರವಾರ ಸಂಜೆ ಜಮೀನಿನಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದ ಸಂದರ್ಭದಲ್ಲಿ ಅಡ್ಡಲಾಗಿದ್ದ ವಿದ್ಯುತ್ ವೈರ್ ಅನ್ನು ಎತ್ತಿ ಮರಕ್ಕೆ ಕಟ್ಟಲು ಹೋಗಿ, ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ಈ ಸಂಬಂಧ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.