ಮೈಸೂರು: ಎನ್.ಆರ್. ಚಂದ್ರವದನರಾವ್ ಅವರ ಸಾಹಿತ್ಯ ಚಿತ್ತಾರ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಮೇ 14 ರಂದು ನಡೆಯಲಿದೆ.
ವೆಂಕಟಗಿರಿ ಪ್ರಕಾಶನ, ಆಚಾರ್ಯ ಪುರುಷೋತ್ತಮ ವಿದ್ಯಾಪೀಠ, ಹಿರಣ್ಮಯಿ ಪ್ರತಿಷ್ಠಾನ, ವೈಷ್ಣವಿ ಸಂಗೀತ ಸಭಾ ಇವರ ಸಂಯುಕ್ತಾಶ್ರಯದಲ್ಲಿ ಅಂದು ಸಂಜೆ 5.30ಕ್ಕೆ ಕೃಷ್ಣಮೂರ್ತಿಪುರಂ ನಮನ ಕಲಾಮಂಟಪದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಈ ಕೃತಿಯನ್ನು ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಆರ್. ರಮೇಶ್ ಲೋಕಾರ್ಪಣೆಗೊಳಿಸುವರು.
ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅಧ್ಯಕ್ಷತೆ ವಹಿಸುವರು. ಕೃತಿ ಕುರಿತು ಲೇಖಕಿ ವಿಮಲಶ್ರೀ ಮಾತನಾಡುವರು. ಸಂಸ್ಕೃತಿ ಪೋಷಕ ಕೆ. ರಘುರಾಂ ಸೇರಿದಂತೆ ಇತರರು ಭಾಗವಹಿಸುವರು ಎಂದು ವೆಂಕಟಗಿರಿ ಪ್ರಕಾಶನದ ಮಾಲೀಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ನೀ. ಗಿರಿಗೌಡ ತಿಳಿಸಿದ್ದಾರೆ.