ಹುಣಸೂರು: ಬಸವ ಜಯಂತಿ

Updated on: 

ಹುಣಸೂರು: ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿಯ ಶತಮಾನೋತ್ಸವ ಸಮಾರಂಭವು ಮೇ 13ರಂದು ತಾಲೂಕಿನ ಗಾವಡಗೆರೆಯ ಗುರುಲಿಂಗಜಂಗಮದೇವರ ಮಠದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಕರ್ಪೂರವಳ್ಳಿ ಜಂಗಮಮಠದ ಚಂದ್ರಶೇಖರ ಸ್ವಾಮೀಜಿ ಧ್ವಜಾರೋಹಣ ನೇರವೇರಿಸುವರು. ನಂತರ ಗುರುಲಿಂಗಜಂಗಮ ಮಠದ ನಟರಾಜ ಸ್ವಾಮೀಜಿ ನೇತೃತ್ವದಲ್ಲಿ ಕಲಶಕನ್ನಡಿ, ಮಂಗಳವಾದ್ಯ, ವೀರಗಾಸೆ, ನಂದಿಧ್ವಜ, ಪೂಜಾಕುಣಿತ ಹಾಗೂ ಕಲಾಮೇಳದೊಂದಿಗೆ ಪವಾಡ ಬಸವೇಶ್ವರರ ಉತ್ಸವ ನಡೆಯಲಿದೆ. ಉತ್ಸವವನ್ನು ಮಾದಹಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ ಉದ್ಘಾಟಿಸವರು.
ಕನಕಪುರ ದೇಗುಲಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಎಚ್.ಪಿ. ಮಂಜುನಾಥ್, ಕಾಗಿನೆಲೆ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ರಾವಂದೂರಿನ ಮುರುಘಾಮಠದ ಮೋಕ್ಷಪತಿ ಸ್ವಾಮೀಜಿ, ಚುಂಚನಕಟ್ಟೆ ಆದಿಚುಂಚನಗಿರಿ ಶಾಖಾ ಮಠದ ಶಿವಾನಂದ ಸ್ವಾಮೀಜಿ, ಕಸಾಪ ತಾಲೂಕು ಅಧ್ಯಕ್ಷ ವಿ.ಪಿ. ಸಾಯಿನಾಥ್ ಭಾಗವಹಿಸುವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com