ಮೈಸೂರು: ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸುತ್ತೂರು ಎಸ್. ಮಾಲಿನಿ ಅವರು ಕ್ಯಾನ್ಸರ್ ವಿರುದ್ಧ ಸೆಣಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಉಪನ್ಯಾಸ ನೀಡಿದ್ದು, ಸದರಿ ಕಾರ್ಯಕ್ರಮವು ಮೇ 14ರ ಬೆಳಗ್ಗೆ 9.30ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಸುವರ್ಣ ಮಹೋತ್ಸವ
ಅಮರ ಕಲಾ ಸಂಘದ ಸುವರ್ಣ ಮಹೋತ್ಸವವನ್ನು ಮೇ 14 ರಿಂದ 19 ರವರೆಗೆ ಕರ್ನಾಟಕ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದು, ಮೇ 15ರ ಸಂಜೆ 6ಕ್ಕೆ ಉದ್ಯಮಿ ಕೆ.ವಿ. ಮೂರ್ತಿ, ನಟ ಮಂಡ್ಯ ರಮೇಶ್, ಕೆ.ಎನ್. ಅಣ್ಣೇಗೌಡ, ಬಿ.ವಿ. ರಾಜಾರಾಂ ಭಾಗವಹಿಸುವರು. ಮೇ 19ರ ಸಂಜೆ 6ಕ್ಕೆ ನಡೆಯುವ ಸಮಾರೋಪದಲ್ಲಿ ಕೆ.ಆರ್. ರಾಮಕೃಷ್ಣ, ಸುಂದರಶ್ರೀ, ಟಿ.ಆರ್. ಹರೀಶ್ ಭಾಗವಹಿಸುವರು.
ಹೊಲಿಗೆ ಯಂತ್ರ ತರಬೇತಿ
ಮೈಸೂರು ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದಲ್ಲಿ ಮಹಿಳೆಯರಿಗೆ ಮೇ 20ರಿಂದ ಆರು ತಿಂಗಳ ಅವಧಿಯ ಬ್ಯೂಟಿಷಿಯನ್ ಹಾಗೂ ಹೊಲಿಗೆ ಸರ್ಟಿಫಿಕೆಟ್ ತರಬೇತಿ ನೀಡಲಿದ್ದು, ಮೊ. 9591407990 ಸಂಪರ್ಕಿಸಬಹುದು.
ಸಿಇಟಿ ತರಬೇತಿ
ನೇತಾಜಿ ಎಜುಕೇಷನ್ ಫೌಂಡೇಷನ್ ವತಿಯಿಂದ ಎಲ್ಐಸಿ ಕ್ಲರಿಕಲ್ ಹುದ್ದೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ 45 ದಿನಗಳ ತರಬೇತಿ ನೀಡಲಿದ್ದು, ಮೊ. 9980639953 ಸಂಪರ್ಕಿಸಬಹುದು.
ಕ್ಯಾನ್ಸರ್ ತಪಾಸಣೆ
ವಾಣಿವಿಲಾಸ ರಸ್ತೆಯಲ್ಲಿರುವ ಪ್ರೀತಿ ಕ್ಯಾನ್ಸರ್ ಸೆಂಟರ್ನಲ್ಲಿ ಮೇ 16 ರಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಶಿಬಿರದಲ್ಲಿ ಭಾಗವಹಿಸಬಹುದು. ದೂ. 0821- 4259259 ಸಂಪರ್ಕಿಸಬಹುದು.