ಕೆ.ಆರ್. ನಗರ: ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಾಯಕ ಸಮಾಜದ ಮನೆಗಳಿಗೆ ನುಗ್ಗಿ ದಾಂದಲೆ ಮತ್ತು ಹಲ್ಲೆ ನಡೆಸಿ ಜೀವ ಭಯ ಒಡ್ಡಿರುವುದು ಖಂಡನೀಯ ಎಂದು ಜೆಡಿಎಸ್ ಬೆಂಬಲಿತ ನಾಯಕ ಸಮಾಜದ ಮುಖಂಡರು ಟೀಕಿಸಿದರು.
ನಾಯಕ ಸಮಾಜದ ನಿಂದನೆ, ಹಲ್ಲೆ ಪ್ರಕರಣಗಳು ಬಲಿಷ್ಠ ಸಮಾಜಕ್ಕೆ ಸೇರಿದ ಕಾಂಗ್ರೆಸ್ಸಿಗರಿಂದ ನಡೆಯುತ್ತಿದ್ದು, ಪೊಲೀಸರು ಕೂಡಲೇ ಸಮಾಜದ ಬಾಂಧವರಿಗೆ ರಕ್ಷಣೆ ನೀಡಬೇಕು. ಜತೆಗೆ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ನಾಯಕ ಸಮಾಜದ ಮುಖಂಡ ಹಂಪಾಪುರ ಕುಮಾರ್, ವಾಲ್ಮೀಕಿ ಸಂಘದ ಜಿಲ್ಲಾ ಉಪಾಧ್ಯಕ್ಷ ಎಚ್.ಎಂ. ಯೋಗೆಂದ್ರ, ಕಗ್ಗರೆ ಗ್ರಾಪಂ ಅಧ್ಯಕ್ಷ ಬಸವರಾಜು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಪ್ರವೃತ್ತಿ ಹೀಗೆ ಮುಂದುವರಿದರೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾಯಕ ಸಮಾಜದ ಮುಖಂಡರಾದ ಬೈರನಾಯಕ, ಮಹದೇವ, ಕುಮಾರ್, ನಾಗರಾಜು, ಲೋಕೇಶ್, ಕುಚೇಲ, ಹರೀಶ್, ಗಣೇಶ್, ನರಸಿಂಹನಾಯಕ, ಉಮೇಶ್, ಶಾಂತಿಕುಮಾರ್ ಇದ್ದರು.