ನೀರಿನ ಸಮಸ್ಯೆ ನೀಗಲು ಮನವಿ

Updated on: 

ಮೈಸೂರು: ನಗರದಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆ ಪರಿಹರಿಸುವಂತೆ ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್ ಮನವಿ ಮಾಡಿದ್ದಾರೆ. ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತದೆ. ನಾನು ಪ್ರತಿನಿಧಿಸುತ್ತಿದ್ದ ಅರವಿಂದನಗರದ ವಾರ್ಡಿನಲ್ಲಿ ನೀರಿನ ಸಮಸ್ಯೆ ಉದ್ಭವಿಸಿತ್ತು. ಆಗ ವಾಣಿವಿಲಾಸ ನೀರು ಸರಬರಾಜು ಕೇಂದ್ರಕ್ಕೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ದಿಗ್ಬಂಧನಲ್ಲಿಡಲಾಯಿತು. ಪರಿಣಾಮ ನಮ್ಮ ವಾರ್ಡಿಗೆ ಕಬಿನಿಯಿಂದ ನೀರು ಪೂರೈಸಲಾಯಿತು. ಹೀಗಾಗಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸದಿದ್ದರೆ ಕೆಲಸ ಸಾಧ್ಯವಿಲ್ಲ ಎಂದಿದ್ದಾರೆ.

ಟೈಟಾನ್‌ದಿಂದ ರಿಯಾಯ್ತಿ
ಟೈಟಾನ್ ಐ ಪ್ಲಸ್ ಫ್ರೇಮ್‌ಗಳು ಮತ್ತು ಸನ್‌ಗ್ಲಾಸ್‌ಗಳಿಗೆ ಶೇ. 40 ರಷ್ಟು ರಿಯಾಯಿತಿ ಘೋಷಿಸಿದೆ. ಮೇ 16 ರಿಂದ ನಗರದ ಎಲ್ಲಾ ಟೈಟಾನ್ ಐ ಪ್ಲಸ್ ಮಳಿಗೆಗಳಲ್ಲಿ ಈ ರಿಯಾಯಿತಿ ಲಭ್ಯವಿದೆ. ಟೈಟಾನ್ ಲೆನ್ಸ್‌ಗಳ ಮೇಲೆ ಶೇ. 10 ರಷ್ಟು ನೇರ ರಿಯಾಯಿತಿ ಲಭ್ಯವಿದೆ. ಈ ಕೊಡುಗೆಯು ಮಳಿಗೆಯ 300ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಲಭ್ಯವಿದೆ ಎಂದು ಐವೀಯರ್ ವಿಭಾಗದ ವ್ಯವಸ್ಥಾಪಕ ವಿವೇಕ್ ದಾಮೋದರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಟೈಟಾನ್ ಪ್ಲಸ್ ಫ್ರೇಮ್ಸ್, ಲೆನ್ಸ್ ಮತ್ತು ಸನ್‌ಗ್ಲಾಸ್‌ಗಳ ಮೇಲೆ ಅಚ್ಚರಿಯ ಕೊಡುಗೆ ನೀಡುತ್ತಿದೆ. ಬೇಸಿಗೆಗಾಗಿ ಕನ್ನಡಕ ಮತ್ತು ಕನ್ನಡಕೇತರ ವಲಯಗಳಲ್ಲಿ ಸೇವೆ ನೀಡುತ್ತಿದೆ. ಗುಣಮಟ್ಟದ ಕನ್ನಡಕ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಿದರು.

ದಕ್ಷಿಣ ಕೇಸರಿ ಪ್ರಶಸ್ತಿ
ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605ಕ್ಕಿಂತ ಅಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಂದ ಲಯನ್ಸ್ ಸಂಸ್ಥೆ ಮೈಸೂರು ದಕ್ಷಿಣ ವತಿಯಿಂದ ದಕ್ಷಿಣ ಕೇಸರಿ ಎಸ್ಸೆಸ್ಸೆಲ್ಸಿ ಟಾಪರ್ಸ್ ಆವಾರ್ಡ್‌ಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿಯ ಜೊತೆ ಅಂಕ ಪಟ್ಟಿಯ ನಕಲು ಪ್ರತಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಯನ್ ರಾಜನ್, ಆರ್.ಬಿ. ಪೈಪ್ಸ್ ಮತ್ತು ಟ್ಯೂಬ್ಸ್, ನಂ. 1551, ಎಂ.ಜಿ. ರಸ್ತೆ, ಮೈಸೂರು- 570004 ಈ ವಿಳಾಸಕ್ಕೆ ಮೇ 25 ರೊಳಗೆ ಕಳುಹಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9845197843 ಸಂಪರ್ಕಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com