ಸಾಲಿಗ್ರಾಮದಲ್ಲಿ ಬಸವೇಶ್ವರ ಜಯಂತಿ

Updated on: 

ಕ.ಪ್ರ.ವಾರ್ತೆ ,  ಸಾಲಿಗ್ರಾಮ್ಣ ಮೇ 15
ಬಸವೇಶ್ವರ ದೇವಾಲಯದಲ್ಲಿ ಮಹಾ ಮಾನವತಾವಾದಿ, ಸಮಾಜ ಸುಧಾರಕ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ಭಕ್ತಾದಿಗಳು ಸಂಭ್ರಮದಿಂದ ಆಚರಿಸಿದರು. ಸೋಮವಾರ ಬಸವ ಜಯಂತಿ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಎಸ್.ಆರ್. ಭಾಸ್ಕರ್, ನಾರಾಯಣ್, ರಾಮು, ಪ್ರಕಾಶ್, ರವಿ, ಮಂಜುನಾಥ್, ರಘು, ರಮೇಶ್ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com