ಮೈಸೂರು: ಬೋಗಾದಿ ರಸ್ತೆಯ ಕೆ. ಹೆಮ್ಮನಹಳ್ಳಿಯಲ್ಲಿ ನಿರ್ಮಿಸಿರುವ ಶ್ರೀರಾಮ ಮಂದಿರದ ಉದ್ಘಾಟನಾ ಸಮಾರಂಭವು ಮೇ 16 ಮತ್ತು 17 ರಂದು ನಡೆಯಲಿದೆ. ಹೊಸದುರ್ಗದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ ಜರುಗಲಿದೆ. ಮೇ 16 ರಂದು ಹೋಮ, ಪ್ರಾಣ ಪ್ರತಿಷ್ಠೆ, ಕುಲ ದೇವರ ಉತ್ಸವ, ಮೇ 17ರ ಮಧ್ಯಾಹ್ನ 2.30ಕ್ಕೆ ನಾಡಕುಸ್ತಿ ಪಂದ್ಯಾವಳಿಗೆ ಶಾಸಕ ಜಿ.ಟಿ. ದೇವೇಗೌಡ ಚಾಲನೆ ನೀಡುವರು ಎಂದು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪಕ ಬಿ. ಮಂಜು ತಿಳಿಸಿದ್ದಾರೆ.
25ರಂದು ಕಬ್ಬು ಬೆಳೆಗಾರರ ರಾಷ್ಟ್ರೀಯ ಸಮಾವೇಶ
ಕ.ಪ್ರ.ವಾರ್ತೆ , ಮೈಸೂರು , ಮೇ 15
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಮೇ 25ರಂದು ಬೆಂಗಳೂರಿನ ಪುರಭವನದಲ್ಲಿ ಕಬ್ಬು ಬೆಳೆಗಾರ ರೈತರ