ಎಚ್.ಡಿ.ಕೋಟೆ: ತಾಲೂಕಿನ ಸುರಿದ ಭಾರಿ ಮಳೆಗೆ 90 ಮನೆಗಳಿಗೆ ಹಾನಿಯಾಗಿದ್ದು, ಸಿಡಿಲಿಗೆ ಎರಡು ಹಸುಗಳು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ತಾಲೂಕಿನ ಕಾಳೇಗೌಡನಪುರ, ಹೊಸಳ್ಳಿ ಮತ್ತು ರಾಜೇಗೌಡನಹುಂಡಿಯಲ್ಲಿ ಧಾರಾಕಾರ ಮಳೆಯಾಗಿದ್ದು, 90 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ. ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.