ಶ್ರೀರಾಮುಲು ಪ್ರಚಾರ

Updated on: 

ಪಿರಿಯಾಪಟ್ಟಣ: ರಾಜ್ಯ ಸರ್ಕಾರದ ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಬಹಳ ದಿನ ಸರ್ಕಾರ ಉಳಿಯುವಂತೆ ಕಾಣುತ್ತಿಲ್ಲ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಹಾಗೂ ಶಾಸಕ ಶ್ರೀರಾಮುಲು ಭವಿಷ್ಯ ನುಡಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಡಿ. ಗಣೇಶ್ ಪರ ಮತಯಾಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಕಾಂಗ್ರೆಸ್ ವರಿಷ್ಠರು ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ ಎಂದರು.
ಇನ್ನು ತಮ್ಮ ಪಕ್ಷದ ಸೋಲಿನ ಬಗ್ಗೆ ಕೇಳಲಾದ ಪ್ರಶ್ನೆಗೆ, ತಮ್ಮದು ಚಿಕ್ಕ ಪ್ರಾದೇಶಿಕ ಪಕ್ಷವಾಗಿದ್ದು ಪ್ರಚಾರಕ್ಕೆ ಹೆಚ್ಚು ಅನುಕೂಲ ಸಿಗಲಿಲ್ಲ ಹಾಗೂ ದೊಡ್ಡ ದೊಡ್ಡ ಪಕ್ಷಗಳ ದೊಡ್ಡ ದೊಡ್ಡ ನಾಯಕರು ಇರುವುದರಿಂದ ನಾವು ಸೋಲಬೇಕಾಯಿತು. ರಾಷ್ಟ್ರೀಯ ಪಕ್ಷಗಳ ದುರಾಡಳಿತ ಹಾಗೂ ಪಕ್ಷಪಾತದಿಂದಾಗಿ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಕಾರಕ್ಕೆ ಬರಲಿವೆ. ಪಕ್ಷದ ಅಭ್ಯರ್ಥಿ ಎಚ್.ಡಿ. ಗಣೇಶ್ ಅವರನ್ನು ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ನಂತರ ತಾಲೂಕಿನ ಸೂಳೆಕೋಟೆ, ಶ್ಯಾನುಭೋಗನಹಳ್ಳಿ, ಮುತ್ತಿನಮುಳಸೋಗೆ, ಆವರ್ತಿ, ದಿಂಡಗಾಡು, ಬೈಲುಕುಪ್ಪೆ, ಆಲನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು.
ಅಭ್ಯರ್ಥಿ ಎಚ್.ಡಿ. ಗಣೇಶ್, ಪಕ್ಷದ ರಾಜ್ಯಾಧ್ಯಕ್ಷ ಜಿಗಣಿ ಶಂಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾಪ್ರಸಾದ್, ಜಿಲ್ಲಾಧ್ಯಕ್ಷ ಬನ್ನೂರ್‌ಕುಮಾರ್, ತಾಲೂಕು ಅಧ್ಯಕ್ಷ ರಹಮತ್‌ಜಾನ್‌ಬಾಬು, ಪದಾಧಿಕಾರಿಗಳಾದ ಜಯಲಕ್ಷ್ಮಿ, ಎ.ಸಿ. ಸೋಮಶೇಖರಯ್ಯ, ವೇದಾಕ್ಷಿ ಗಣೇಶ್, ಅಂಬುಜಾಬಾಯಿ, ಮಜರ್‌ಪಾಷಾ, ಚಲುವನಾಯಕ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com