ದಸರಾ ಉದ್ಘಾಟನೆಗೆ ಕಾರ್ನಾಡ್ ಬೇಡ

Updated on: 

ಮೈಸೂರು: ನಾಸ್ತಿಕರು ಮತ್ತು ವಿವಾದಾತ್ಮಕ ಹೇಳಿಕೆಗೆ ಹೆಸರಾದ ಜ್ಞಾನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಿಸುವುದು ಬೇಡ. ಈ ವಿಷಯದಲ್ಲಿ ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ನಾಡ ದೇವತೆ ಶ್ರೀ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸದೆ ಅವಮಾನಿಸುವುದು ತಪ್ಪು. ಆದ್ದರಿಂದ ನಾಸ್ತಿಕರನ್ನು ಕರೆಯುವುದಕ್ಕಿಂತ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪಡೆದ ಡಾ.ಎಸ್.ಎಲ್. ಭೈರಪ್ಪ ಅವರನ್ನು ಆಹ್ವಾನಿಸಿದ್ದರೆ ಒಳ್ಳೆಯದಿತ್ತು. ಹಲವು ಸಂದರ್ಭಗಳಲ್ಲಿ ಗಿರೀಶ್ ಕಾರ್ನಾಡ್ ಅವರು ಹಿಂದೂ ಧರ್ಮದ ವಿರುದ್ಧವಾಗಿ ಮಾತನಾಡಿದ್ದಾರೆ. ಹಲವು ವಿವಾದಾತ್ಮಕ ಹೇಳಿಕೆಗೆ ಹೆಸರಾಗಿದ್ದಾರೆ. ಆದ್ದರಿಂದ ಅವರಿಂದ ದಸರಾ ಉದ್ಘಾಟಿಸುವ ಬದಲು ಬೇರೆಯವರ ಹೆಸರು ಸೂಚಿಸುವುದು ಒಳ್ಳೆಯದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಯಾದರೆ ನಾವು ಪ್ರತಿಭಟಿಸಲು ಸಿದ್ಧರಾಗಿದ್ದೇವೆ. ಈ ಸಂಬಂಧ ತಕ್ಷಣ ಸೂಕ್ತ ತೀರ್ಮಾನಕ್ಕೆ ಮುಂದಾಗಬೇಕು ಎಂದರು. ದಸರಾ ಸಮೀಪಿಸುತ್ತಿದ್ದರೂ ಸರಿಯಾಗಿ ಯಾವುದೆ ಕಾಮಗಾರಿ ನಡೆದಿಲ್ಲ. ರಸ್ತೆಗಳಲ್ಲಿನ ಗುಂಡಿ ಮುಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 19 ಕೋಟಿ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಮುಖ್ಯಮಂತ್ರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು. ಜೆಡಿಎಸ್ ವಕ್ತಾರ ಎಸ್ಬಿಎಂ ಮಂಜು, ಮುಖಂಡರಾದ ರಾಘವರೆಡ್ಡಿ, ರಾಮು, ರೂಪೇಶ್ ಇದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com