ಪಿರಿಯಾಪಟ್ಟಣ: ನನ್ನ ಏಳಿಗೆಗೆ ತಾಲೂಕಿನ ಜನತೆಯ ಸಹಕಾರವೇ ಕಾರಣ ಎಂದು ಖ್ಯಾತ ಉದ್ಯಮಿ ಎಂ.ಕೆ. ಪೋತರಾಜು ಹೇಳಿದರು.
ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿರುವ ಮುತ್ತುರಾಯಸ್ವಾಮಿ ದೇವಾಲಯದ ಅವರಣದಲ್ಲಿ ತಮ್ಮ 60ನೇ ಹುಟ್ಟಹಬ್ಬದ ಅಂಗವಾಗಿ ನಿರ್ಮಿಸಿರುವ ನೂತನ ಅನ್ನದಾಸೋಹ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಬಡವರ, ಕೂಲಿ ಕಾರ್ಮಿಕರ ಮಕ್ಕಳ ಮದುವೆಗೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂದು ತಾವು ಈ ಕಟ್ಟಡವನ್ನು ನಿರ್ಮಿಸಿಕೊಟ್ಟಿದ್ದು, ಮುಂದೆಯೂ ಕೂಡ ತಮ್ಮ ಧಾರ್ಮಿಕ ಕಾರ್ಯಗಳು ಮುಂದುವರಿಯಲಿವೆ ಎಂದು ತಿಳಿಸಿದರು. ಉದ್ಯಮಿ ಬಾಲಾಜಿ ಪೋತರಾಜು, ಕೋಮಲಾ ಪೋತರಾಜು, ಪಪಂ ಮಾಜಿ ಅಧ್ಯಕ್ಷ ವೈ. ವೆಂಕಟಯ್ಯ, ರಾಜಶೇಖರ್ ಇದ್ದರು.