ಮೈಸೂರು: ಕನ್ನಡ ಹಿರಿಯ ಬರಹಗಾರರಾದ ವೈದೇಹಿ, ಸಾರಾ ಅಬೂಬಕರ್, ಕೆ.ಟಿ. ಗಟ್ಟಿ ಹಾಗೂ ಅನಿವಾಸಿ ಕಥೆಗಾರ ಡಾ.ಗುರುಪ್ರಸಾದ್ ಕಾಗಿನೆಲೆ ಅವರು ಸ್ವರಚಿತ ಕಥಾ ಪಾತ್ರವೊಂದರ ಕುರಿತ ಆತ್ಮೀಯ ಅನಿಸಿಕೆಗಳನ್ನು ಹಂಚಿಕೊಂಡಿರುವ ಕನ್ನಡ ಭಾರತಿ ಕಾರ್ಯಕ್ರಮವು ಮೈಸೂರು ಆಕಾಶವಾಣಿಯಲ್ಲಿ ಆ.3ರ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ಕೆ.ಟಿ. ಗಟ್ಟಿ ಅವರು ತಮ್ಮ ಹೊಸ ಕಾದಂಬರಿಯ ನಾಯಕಿ ಹಲೀಮಾ ಕುರಿತು, ಸಾರಾ ಅಬೂಬಕರ್ ಅವರು ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ನಾಯಕಿ ನಾದಿರಾಳ ಕುರಿತು, ವೈದೇಹಿ ಅವರು ಪದೇ ಪದೇ ಕಾಣಿಸಿಕೊಳ್ಳುವಿನ ಅಕ್ಕುವಿನ ಕುರಿತು ಹಾಗೂ ಗುರುಪ್ರಸಾದ್ ಕಾಗಿನೆಲೆ ಅವರು ಗುಣ ಕಾದಂಬರಿಯ ನಾಯಕಿ ಕ್ಷಮಾ ಕುರಿತು ಮಾತನಾಡಿದ್ದಾರೆ ಎಂದು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಅಬ್ದುಲ್ ರಶೀದ್ ತಿಳಿಸಿದ್ದಾರೆ.