ವಿಶ್ವ ಆದಿವಾಸಿ ದಿನಾಚರಣೆ 9ಕ್ಕೆ

Updated on: 

ಮೈಸೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ವತಿಯಿಂದ 20ನೇ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಕಲಾಮೇಳವನ್ನು ಆ.9 ರಂದು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ವಸ್ತುಪ್ರದರ್ಶನ ಆವರಣದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಮಿಸುವ 50 ಬುಡಕಟ್ಟು ಜನಾಂಗದವರು ತಮ್ಮ ಸಂಪ್ರದಾಯ ಕಲಾಪ್ರದರ್ಶನ ಪ್ರಸ್ತುತಪಡಿಸುವರು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಸ್ತುಪ್ರದರ್ಶನ ಆವರಣದಲ್ಲಿ ನಡೆಯುವ ವಿಶ್ವ ಆದಿವಾಸಿ ದಿನಾಚರಣೆ ಹಾಗೂ ಸಮಾವೇಶವನ್ನು ಮಧ್ಯಾಹ್ನ 12ಕ್ಕೆ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಮಾಜಿ ಸಂಸದ ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸುವರು. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದರಾದ ಆರ್. ಧ್ರುವನಾರಾಯಣ, ಪ್ರತಾಪ್ ಸಿಂಹ, ಶಾಸಕ ಎಚ್.ಪಿ. ಮಂಜುನಾಥ್ ಅತಿಥಿಗಳಾಗುವರು ಎಂದರು. ಈ ಸಮಾವೇಶದಲ್ಲಿ ಆದಿವಾಸಿ ಉಸಿರು ಮತ್ತು ತಂತಿ ಬೇಲಿಯೊಳಗಿನ ಜಗತ್ತು ಎಂಬ ಸಂಚಿಕೆ ಬಿಡುಗಡೆಗೊಳಿಸಲಾಗುವುದು. ರಾಜ್ಯದ 30 ಜಿಲ್ಲೆಗಳಿಂದ 10 ಸಾವಿರ ಆದಿವಾಸಿಗಳು ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ವಿವಿಧ ಭಾಗಗಳಿಂದ ಮೈಸೂರಿಗೆ ಆಗಮಿಸುತ್ತಿರುವ ಸಾವಿರಾರು ಬುಡಕಟ್ಟು ಜನರಿಗೆ ಮೈಸೂರು ಅರಮನೆ, ಮೃಗಾಲಯ ವೀಕ್ಷಿಸಲು ರಾಜ್ಯ ಸರ್ಕಾರ ಉಚಿತ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪರಿಷತ್ತಿನ ಗೌರವಾಧ್ಯಕ್ಷ ಡಾ.ಕೆ.ಸುಂದರನಾಯಕ್, ಪ್ರಧಾನ ಕಾರ್ಯದರ್ಶಿ ಬಿ.ಕಾವೇರ, ಪದಾಧಿಕಾರಿಗಳಾದ ಕುಮಾರ, ಮಧುಕುಮಾರ್, ವಿಜಯಕುಮಾರ್, ಮಹದೇವಸ್ವಾಮಿ, ಮುತ್ತಯ್ಯ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com