ಮೈಸೂರು: ಚಲಿಸುತ್ತಿದ್ದ ಬಸ್ನಿಂದ ಆಯತಪ್ಪಿ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಕುಕ್ಕರಹಳ್ಳಿ ಕೆರೆ ಸಮೀಪ ಬುಧವಾರ ನಡೆದಿದೆ. ಎಚ್.ಡಿ. ಕೋಟೆ ತಾಲೂಕು ಕಣಿಯನಹುಂಡಿ ಗ್ರಾಮದ ನಿಂಗಮ್ಮ(70) ಮೃತ ವೃದ್ಧೆ. ಸಂಬಂಧಿ ಒಬ್ಬರಿಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದರಿಂದ ನೋಡಲು ಬಂದಿದ್ದ ನಿಂಗಮ್ಮ ಅವರು ಕುಕ್ಕರಹಳ್ಳಿ ಕೆರೆ ಮತ್ತು ಗಂಗೋತ್ರಿ ಕೂಡುವ ಸಿಗ್ನಲ್ ಬಳಿ ಬಸ್ ನಿಧಾನವಾಗಿ ಚಲಿಸುತ್ತಿದ್ದಾಗ ಇಳಿಯಲು ಯತ್ನಿಸಿದಾಗ ಆಯತಪ್ಪಿ ಬಿದ್ದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಮೊದಲು ಕಾಮಾಕ್ಷಿ ಆಸ್ಪತ್ರೆಗೆ, ಬಳಿಕ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಚಿಕಿತ್ಸೆಗೆ ಸ್ಪಂದಿಸದೆ ನಿಂಗಮ್ಮ ಮೃತಪಟ್ಟಿದ್ದಾರೆ. ಈ ಸಂಬಂಧ ಕುವೆಂಪುನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement