ದುಡಿಮೆ ಕಡೆ ಗಮನ ನೀಡಿ

Updated on: 

ಪಿರಿಯಾಪಟ್ಟಣ: ಮಹಿಳೆಯರು ದುಡಿಮೆ ಕಡೆಗೂ ಹೆಚ್ಚು ಒತ್ತುಕೊಟ್ಟಲ್ಲಿ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಜೆಎಸ್‌ಎಸ್ ಜನಶಿಕ್ಷಣ ಸಂಸ್ಥೆಯ ನಿರ್ದೇಶಕ ರಮೇಶ್ ಹೇಳಿದರು.
ತಾಲೂಕಿನ ಕೋಣಸೂರು ಗ್ರಾಮದಲ್ಲಿ ಮೈರಾಡ ಸಂಸ್ಥೆ ಹಾಗೂ ಜೆಎಸ್‌ಎಸ್ ಜನಶಿಕ್ಷಣ ಸಂಸ್ಥೆಯಿಂದ ಗ್ರಾಮದ ಮಹಿಳೆಯರಿಗಾಗಿ ಏರ್ಪಡಿಸಿದ್ದ ಹೊಲಿಗೆ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ತಮ್ಮ ಮನೆಗಳಲ್ಲಿ ಹೊಲಿಗೆ ಕಾರ್ಯದಲ್ಲಿ ತೊಡಗುವುದರಿಂದ ಹೆಚ್ಚು ಆದಾಯ ಗಳಿಸಬಹುದು ಎಂದು ತಿಳಿಸಿದರು.
ಕೊಣಸೂರು ಗ್ರಾಪಂ ಸದಸ್ಯ ಲೋಕೇಶ್ ಮಾತನಾಡಿ, ಸಂಘ ಸಂಸ್ಥೆಗಳು ನೀಡುವ ತರಬೇತಿಗಳನ್ನು ಪಡೆದು ಸಾರ್ವಜನಿಕರು ಆರ್ಥಿಕವಾಗಿ ಮುಂದೆ ಬರಲು ಪ್ರಯತ್ನಿಸಬೇಕು. ಎಟ್ಲಿ ವರ್ಗದ ಜನರಿಗೂ ವಿವಿಧ ಸಂಘ ಸಂಸ್ಥೆಗಳು ಉಚಿತ ತರಬೇತಿ ಕೊಡುವ ಮೂಲಕ ಅವರ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುತ್ತಿದ್ದು, ಇದರ ಪ್ರಯೋಜನವನ್ನು ಗ್ರಾಮೀಣ ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮೈರಾಡ ಸಂಸ್ಥೆಯ ನಿರ್ದೇಶಕ ಶಂಕರ್, ತಾಪಂ ಸದಸ್ಯ ಯೋಗೇಶ್, ತರಬೇತಿ ಶಿಕ್ಷಕಿ ಮಂಜುಳಾ, ಮುಖಂಡರಾದ ಆನಂದ್, ಮಹದೇವ್, ಚಂದ್ರಪ್ಪ, ಮೂರ್ತಿ, ಮಂಜು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com