ಮೈಸೂರು: ಚಾಮುಂಡಿ ಬೆಟ್ಟದ ಮಾರ್ಗದಲ್ಲಿ ಎರಡು ಸಾರಿಗೆ ಬಸ್ಗಳು ಮುಖಾಮುಖಿ ಡಿಕ್ಕಿಯಾಗಿ, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಆಷಾಢ ಶುಕ್ರವಾರ ಅಂಗವಾಗಿ ಚಾಮುಂಡಿಬೆಟ್ಟಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಲಲಿತಮಹಲ್ ಹೆಲಿಪ್ಯಾಡ್ನಿಂದ ಸಾರಿಗೆ ಬಸ್ನ ಉಚಿತ ವ್ಯವಸ್ಥೆ ಮಾಡಲಾಗಿತ್ತು. ಎಂದಿನಂತೆ ಹೆಲಿಪ್ಯಾಡ್ನಿಂದ ಚಾಮುಂಡಿಬೆಟ್ಟಕ್ಕೆ ಹೋಗುತ್ತಿದ್ದ ಬಸ್ಸಿಗೂ, ಬೆಟ್ಟದಿಂದ ಬರುತ್ತಿದ್ದ ಬಸ್ಸಿಗೂ ಬೆಟ್ಟದ ವೀಕ್ಷಣಾ ಗೋಪುರದ ಬಳಿಯ ಕ್ರಾಸ್ನಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎರಡೂ ಬಸ್ಗಳ ಮುಂಭಾಗ ಜಖಂಗೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಆಗಿಲ್ಲ. ಯಾರಿಗೂ ಗಾಯಗಳು ಕೂಡ ಆಗಿಲ್ಲ. ಕೂಡಲೆ ಪೊಲೀಸರು ಪ್ರಯಾಣಿಕರನ್ನು ಬೇರೊಂದು ಬಸ್ನಲ್ಲಿ ಕಳುಹಿಸಿದರು. ಸ್ಥಳಕ್ಕೆ ಕೆ.ಆರ್. ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿದ್ದರು.