ಶಟಲ್ಕಾಕ್ ಪಂದ್ಯಾವಳಿ ಆ.2ಕ್ಕೆ

Updated on: 

ಟಿ. ನರಸೀಪುರ: ಲಿಂಕ್ ರಸ್ತೆಯ ಟಿಎಪಿಸಿಎಂಎಸ್ ಆವರಣದಲ್ಲಿ ಆ.2 ರಂದು ರಾಜ್ಯಮಟ್ಟದ ಶಟಲ್ಕಾಕ್ ಪಂದ್ಯಾವಳಿ ನಡೆಯಲಿದೆ ಎಂದು ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಪುಟ್ಟಸ್ವಾಮಿ ಮತ್ತು ಅಧ್ಯಕ್ಷ ರಘುನಂದನ್ ಹೇಳಿದ್ದಾರೆ. ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ರೋಟರಿ ಕ್ಲಬ್ ಸಂಯುಕ್ತಾಶ್ರಯದಲ್ಲಿ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿರುವ ಪಂದ್ಯಾವಳಿಗೆ ಸಂಸದ ಆರ್. ಧ್ರುವನಾರಾಯಣ್ ಚಾಲನೆ ನೀಡುವರು. ಪಪಂ ಅಧ್ಯಕ್ಷೆ ರತ್ನಮ್ಮಲಿಂಗಣ್ಣ ಅಧ್ಯಕ್ಷತೆ ವಹಿಸುವರು. ತಹಸೀಲ್ದಾರ್ ಸಿ.ಚೌಡಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಮಹೇಶ್ಕುಮಾರ್, ಭೈರಾಪುರ ಗ್ರಾಪಂ ಅಧ್ಯಕ್ಷೆ ಮುಬಿನ್ ತಾಜ್, ಅಬಕಾರಿ ಇನ್ಸ್ಪೆಕ್ಟರ್ ಆರ್.ಉಮಾಶಂಕರ್, ಎಸ್ಐ ವಿ.ಎಸ್. ಶಶಿಕುಮಾರ್, ರೋಟರಿ ಅಧ್ಯಕ್ಷ ಟಿ.ಜಿ. ಪುಟ್ಟಸ್ವಾಮಿ ಬಹುಮಾನ ವಿತರಿಸುವರು.
ಮಕ್ಕಳ ರಕ್ಷಣೆ ಜಾಗೃತಿ ನಾಳೆ
ಅಂತರಸಂತೆ: ಸಮಾಜದಲ್ಲಿ ಮಹಿಳೆಯರ ಮೇಲೆ ಹಾಗೂ ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ಪ್ರಕರಣಗಳನ್ನು ತಹಬದಿಗೆ ತರುವ ಸಲುವಾಗಿ ಸರ್ಕಾರದ ಸೂಚನೆಯಿಂದ ಗ್ರಾಪಂ ವತಿಯಿಂದ ಜು. 31 ರಂದು ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತಾದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 9ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಗುವುದು. ನಂತರ 11ಕ್ಕೆ ಅಂತರಸಂತೆ ಗ್ರಾಪಂ ಆವರಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ. ಗ್ರಾಪಂ ಅಧ್ಯಕ್ಷೆ ಎ.ಎನ್. ಲೀಲಾಶಂಕರ್ ಅಧ್ಯಕ್ಷತೆ ವಹಿಸುವರು.
ಅಪಾಯಕಾರಿ ಕೊಳವೆ ಬಾವಿ
ಅಂತರಸಂತೆ: ಎಚ್.ಡಿ.ಕೋಟೆ ತಾಲೂಕು ಅಂತರಸಂತೆ ಹೋಬಳಿ ನೂರಲಕುಪ್ಪೆ ಗ್ರಾಪಂಗೆ ಸೇರಿದ ಆನಗಟ್ಟಿ ಗ್ರಾಮದ ಕೆರೆ ಹತ್ತಿರ ಕೊಳವೆ ಬಾವಿ ಮುಚ್ಚದೆ ಹಾಗೆ ಬಿಡಲಾಗಿದೆ. ಕುಡಿಯುವ ನೀರಿಗಾಗಿ ಕಳೆದ ಒಂದು ವರ್ಷದಿಂದ ಕೊಳವೆ ಬಾವಿಯನ್ನು ಪಂಚಾಯ್ತಿಯಿಂದ ಕೊರೆಸಲಾಯಿತು. ಆ ಬಾವಿಯಲ್ಲಿ ನೀರು ಬರಲಿಲ್ಲ. ಹಾಗಾಗಿ ಅದನ್ನು ಮುಚ್ಚದೇ ಒಂದು ವರ್ಷದಿಂದ ಹಾಗೆ ಬಿಡಲಾಗಿದೆ. ಆಕಸ್ಮಾತ್ ಮಕ್ಕಳು ಈ ಕಡೆ ಹೋದರೆ ಅವಘಡ ಸಂಭವಿಸುವ ಸಂಭವವಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೊಳವೆ ಬಾವಿ ಮುಚ್ಚಿಸಲು ಕ್ರಮ ತೆಗೆದುಕೊಳ್ಳಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com