ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಹೋಬಳಿ ಎನ್. ಶೆಟ್ಟಿಹಳ್ಳಿಯಲ್ಲಿ ನೂತನವಾಗಿ ಜೀರ್ಣೋದ್ದಾರವಾಗಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಸ್ಥಾನದ ಉದ್ಘಾಟನೆ ಸಮಾರಂಭ ಶುಕ್ರವಾರ ನಡೆಯಲಿದೆ ಎಂದು ಜಿಪಂ ಸದಸ್ಯ ಎಸ್.ಎ. ಶಿವಣ್ಣ ಹೇಳಿದ್ದಾರೆ. ಬೆಟ್ಟದಪುರದ ಮಠದ ಶ್ರೀ ಚೆನ್ನಬಸವದೇಶಿಕೆಂದ್ರ ಸ್ವಾಮೀಜಿ ಅವರು ಉದ್ಘಾಟಿಸುವರು. ಹರಳಹಳ್ಳಿ ಗ್ರಾಮದ ವೇದಮೂರ್ತಿ ಶ್ರೀಕಂಠಸ್ವಾಮಿ ಪೂಜಾ ಕಾರ್ಯವನ್ನು ನೆರವೇರಿಸುವರು. ಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಿದೆ ಎಂದು ತಿಳಿಸಿದ್ದಾರೆ.