
ಮೈಸೂರು: ತಾವು ವಾಸಿಸುತ್ತಿರುವ ಸರ್ಕಾರಿ ಬಂಗಲೆ ಅನುಗ್ರಹದಲ್ಲಿ ಭೂತ ಚೇಷ್ಟೆಯ ಕಾಟವಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್. ಆರ್ ಪಾಟೀಲ್ ಹೇಳಿದರು.
ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನೋತ್ಸವದ ಅಂಗವಾಗಿ ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ ಶಾಖೆ ಆಯೋಜಿಸಿರುವ ಮೂರು ದಿನಗಳ 10ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನುದ್ಘಾಟಿಸಿ ಅವರು ಮಾತನಾಡಿದರು.
ಸಚಿವ ಸ್ಥಾನ ಪಡೆದ ಮೇಲೆ ಬೆಂಗಳೂರಿನ ಸರ್ಕಾರಿ ಬಂಗಲೆ ಅನುಗ್ರಹದಲ್ಲಿ ವಾಸಿಸಲು ಹೋದಾಗ, ಕೆಲವರು ಆ ಮನೆಯಲ್ಲಿ ಪ್ರೇತಾತ್ಮಗಳ ಕಾಟವಿದೆ. ಪಕ್ಕದಲ್ಲಿಯೇ ರೈಲ್ವೆ ಹಳಿ ಇರೋದರಿಂದ ಅಲ್ಲಿ ಆತ್ಮಹತ್ಯೆ ಮಾಡಿಕೊಂಡವನು ಭೂತವಾಗಿ ಕಾಡುತ್ತಿದ್ದಾನೆ. ಮಧ್ಯರಾತ್ರಿ ಭಯಂಕರ ಶಬ್ದಗಳು ಉಂಟಾಗುತ್ತೆ ಎಂದು ಕೆಲವರು ಭಯ ತರಿಸಿದರು.
ಆದರೆ ಈ ಮಾತನ್ನು ನಂಬೋದು ಒಂದೇ, ಮಂತ್ರಿ ಪದವಿಗೆ ರಾಜೀನಾಮೆ ನೀಡೋದೂ ಒಂದೇ ಎಂದು ಭಾವಿಸಿ ಉಳಿದುಕೊಂಡೆ ಎಂದರು.
Advertisement