ರಾಯಚೂರು: ಬಿಜಾಪುರದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾನವಿಯ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಗುತ್ತಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಮತ್ತಿತರೆ ಕ್ಷೇತ್ರದಲ್ಲಿ ಇವರ ಸಾಧನೆ ಮನ್ನಿಸಿ ಸಮ್ಮೇಳನದಲ್ಲಿ ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ತಿಳಿಸಿದ್ದಾರೆ.
ಕೆಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
ರಾಯಚೂರು: ನಗರದ ವಾಡ್ ಸಂಖ್ಯೆ 2ರಲ್ಲಿ ಈಚೆಗೆ ಕರ್ನಾಟಕ ಜನತಾ ಪಾರ್ಟಿಯಿಂದ ಪಕ್ಷದ ಸದಸ್ಯತ್ವ ಅಭಿಯಾನ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಸಂಚಾಲಕ ಪವನ್ ಪಾಟೀಲ್ ಮಾತನಾಡಿದರು. ಪಕ್ಷದ ಪ್ರಮುಖರಾದ ಹರವಿ ಶಂಕರಗೌಡ, ಅಮೀನುದ್ದೀನ್, ಪಂಪಣ್ಣ ಅವರ ಸಮ್ಮುಖದಲ್ಲಿ ವಾರ್ಡಿನ ಪ್ರಮುಖರಾದ ಸೈಯದ್ ಮುನೀರ್, ತಾಯಪ್ಪ, ಮಹಾದೇವಮ್ಮ ಮತ್ತಿತರರು ಕೆಜೆಪಿ ಪಕ್ಷ ಸೇರಿದರು.
ಶ್ರೀಗಳ ನಿಧನಕ್ಕೆ ಭಕ್ತರ ಸಂತಾಪ
ಮಸ್ಕಿ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಶಿವಾಚಾರ್ಯ ಸ್ವಾಮಿಗಳ ನಿಧನದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸಂತಾಪ ಸಭೆ ಆಯೋಜಿಸಲಾಗಿತ್ತು. ಚಂದ್ರಮೌನೇಶ ತಾತಾ, ಬಸನಗೌಡ ಆದಾಪೂರ, ಬಸವರಾಜ ನಾಯಿಕೊಡಿ, ಡಾ. ಬಸವರಾಜ ತಪ್ಪಲದೊಡ್ಡಿ, ಬಸವರಾಜ ಮಿಟ್ಟಿಮನಿ, ಬಸವರಾಜ ಗುಡದೂರು, ಬಸವರಾಜ ಕೋರಿ, ಮಹೇಶಗೌಡ, ಮಲ್ಲಿಕಾರ್ಜುನ ಬೈಲಗುಡ್ಡ, ಪ್ರಕಾಶ ಪಾಟೀಲ್ ಮತ್ತಿತರರು ಇದ್ದರು.