ಸಂಕೇತ್ ಕಾಲೇಜ್‌ಗೆ ಉತ್ತಮ ಫಲಿತಾಂಶ

Updated on: 

ಸಿಂಧನೂರು: ಗುಲ್ಬರ್ಗ ವಿಶ್ವವಿದ್ಯಾಲಯದ ಬಿಕಾಂ ಅಂತಿಮ ವರ್ಷದ ಬಿಕಾಂ 5ನೇ ಸೆಮ್‌ನ ಫಲಿತಾಂಶ ಪ್ರಕಟಗೊಳಿಸಿದ್ದು, ನಗರದ ಪ್ರತಿಷ್ಠಿತ ಸಂಕೇತ್ ಪದವಿ ಕಾಲೇಜ್ ಶೇ.100ರಷ್ಟು ಫಲಿತಾಂಶ ಪಡೆದಿದೆ ಎಂದು ಪ್ರಾಚಾರ್ಯ ಪ್ರಕಾಶ ಎಸ್.ಎಚ್. ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 64 ವಿದ್ಯಾರ್ಥಿಗಳಲ್ಲಿ 22 ಡಿಸ್ಟಿಂಕ್ಷನ್, 32 ಪ್ರಥಮ ದರ್ಜೆ ಹಾಗೂ 10 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ನಾಗಿಣಿ ಎನ್ನುವ ವಿದ್ಯಾರ್ಥಿನಿ 700 ಅಂಕಗಳಿಗೆ 630 ಅಂಕಗಳನ್ನು ಗಳಿಸಿ ಶೇ. 90ರಷ್ಟು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ, ಸುಗ್ರುತಾ ತಬಸುಬ್ ಎನ್ನುವ ವಿದ್ಯಾರ್ಥಿ ಶೇ.88ರಷ್ಟು ಅಂಕಗಳನ್ನು ಪಡೆದಿದ್ದಾರೆ.
ಹಾಗೆಯೇ ಬಿಕಾಂ ಪ್ರಥಮ ವರ್ಷದ ಪ್ರಥಮ ಸೆಮಿಸ್ಟರ್ ಫಲಿತಾಂಶವೂ ಪ್ರಕಟಗೊಂಡಿದ್ದು. ಶೇ. 94.4ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಹಾಜರಾದ 90 ವಿದ್ಯಾರ್ಥಿಗಳಲ್ಲಿ 41 ಡಿಸ್ಟಿಂಕ್ಷನ್, 43 ಪ್ರಥಮ ದರ್ಜೆ ಹಾಗೂ ಒಬ್ಬ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉಮಾಮಹೇಶ್ವರಿ ಎನ್ನುವ ವಿದ್ಯಾರ್ಥಿನಿ 650ಕ್ಕೆ 559 ಅಂಕಗಳನ್ನು ಗಳಿಸಿ ಶೇ.86 ರಷ್ಟು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com