ದರುವೇಶ್ ಸಮಾಜಕ್ಕೆ ಆಯ್ಕೆ

Updated on: 

ಮುದಗಲ್: ದರುವೇಶ್ ಸಮಾಜದ ತಾಲೂಕು ಘಟಕವನ್ನು ರಚಿಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಬ್ದುಲ್ ಖಯುಮ್ ಮಖಾನದಾರ್- ಗೌರವ ಅಧ್ಯಕ್ಷ, ರಹೀಮ್ ಅಲಿ- ಅಧ್ಯಕ್ಷ, ಶಬ್ಬೀರ್ ಅಲಿ- ಉಪಾಧ್ಯಕ್ಷ, ರಹೀಮ್‌ಶಾ ಮಖಾನದಾರ- ಪ್ರ.ಕಾರ್ಯದರ್ಶಿ, ಅಬ್ದುಲ್ ಗಫೂರ ಶಾ- ಸಹ ಕಾರ್ಯದರ್ಶಿ, ಖಾಜಾಪಾಶ- ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಹುಸೇನ ಅಲಿ, ಫಯಾಜ್ ಅಹ್ಮದ್, ಅಖ್ತರ್ ಉಸೇನ್, ರಹಿಮಾತ್ ಅಲಿ, ಮಹ್ಮದ್ ರಫಿಯವರನ್ನು ಅವಿರೋದವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆಹ್ವಾನ: ರಚಿಸಲಾದ ದರವೇಶ್ ಸಮಾಜದ ಸಂಘಕ್ಕೆ ತಾಲೂಕಿನಿಂದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಸಮಾಜದವರು ತಮ್ಮ ಭಾವಚಿತ್ರ, ವಿಳಾಸ, ಉದ್ಯೋಗದ ಬಗ್ಗೆ ಮಾಹಿತಿಯೊಂದಿಗೆ ಅರ್ಜಿ ನೀಡಿ ಸದಸ್ಯತ್ವ ಪಡೆಯಬೇಕೆಂದು ಪ್ರಧಾನ ಕಾರ್ಯದರ್ಶಿ ರಹೀಮ್‌ಶಾ ತಿಳಿಸಿದ್ದಾರೆ.
--
ಓಲೈಕೆಗೆ ಮುಖಂಡರ ಯತ್ನ
ಸಿಂಧನೂರು: ಕಾಂಗ್ರೆಸ್ ಮುಖಂಡ ವಿರುಪಾಕ್ಷಪ್ಪ ನಾಯಕ ಸಕ್ರೀಯ ರಾಜಕಾರಣದಿಂದ ಹಿಂದೆ ಸರಿಯುವ ಇರಾದೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಅವರನ್ನು ಪುನಃ ಕ್ರಿಯಾಶೀಲ ಗೊಳಿಸಲು ಯತ್ನಿಸುತ್ತಿದ್ದಾರೆ.
ಮಾಜಿ ಶಾಸಕರಾದ ಬಾದರ್ಲಿ ಹಂಪನಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಜಹಗೀರದಾರ್ ಸೇರಿದಂತೆ ಯಮನಪ್ಪ ಮಲ್ಲಪೂರು, ಕಲ್ಲೂರು ಬಸಪ್ಪ, ಎಪಿಎಂಸಿ ಅಧ್ಯಕ್ಷ ಹರಟೆನೂರು ಕರಿಯಪ್ಪ ವಕೀಲ ಮತ್ತಿತರ ಕಾಂಗ್ರೆಸ್ ಮುಖಂಡರು ತಮ್ಮ ಧೋರಣೆ ಬದಲಾಯಿಸಿ ಸಕ್ರಿಯರಾಗುವಂತೆ ಕೋರಿದರೂ ನಾಯಕರು ತಮ್ಮ ಧೋರಣೆ ಬದಲಾಯಿಸಿಲ್ಲವೆನ್ನಲಾಗಿದೆ.
ಕಾಂಗ್ರೆಸ್‌ನಿಂದ ಹೊರಗುಳಿದಿರುವ ಸುದ್ದಿ ತಿಳಿದ ಬಿಎಸ್ಸಾರ್ ಕಾಂಗ್ರೆಸ್ ನಿಯೋಜಿತ ಅಭ್ಯರ್ಥಿ ಕೆ.ಕರಿಯಪ್ಪ, ಭೀಮಣ್ಣ ವಕೀಲರು ಬಸವರಾಜ ಬೆಳ್ಳಿಗನೂರು ವಕೀಲರು ಮತ್ತಿತರರು ತಮಗೆ ಮುಂಬರುವ ಚುನಾವಣೆಯಲ್ಲಿ ಸಹಾಯ ಮಾಡುವಂತೆ ಕೇಳುತ್ತಿದ್ದಾರೆ. ಇತ್ತ ಕೆಜೆಪಿ ನಿಯೋಜಿತ ಅಭ್ಯರ್ಥಿ ರಾಜಶೇಖರ ಪಾಟೀಲರೊಂದಿಗೂ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರು ಮತ್ತು ಅವರ ಸಹೋದರರು ಸಹ ಮೊದಲ ಬಾರಿ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿರುವ ತಮ್ಮನ್ನು ಬೆಂಬಲಿಸುವಂತೆ ವಿನಂತಿಸಿದ್ದಾರೆಂದು ಹೇಳಲಾಗಿದೆ.

ತರಬೇತಿ: ಅರ್ಜಿ ಆಹ್ವಾನ
ರಾಯಚೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೌಶಲ್ಯಾಭಿವೃದ್ಧಿ ಯೋಜನೆ ಅಡಿ ಅರ್ಹ ಅಭ್ಯರ್ಥಿಗಳಿಗೆ ಕಿಯೋನಿಕ್ಸ್ ಸಂಸ್ಥೆಯಿಂದ ಬೆಂಗಳೂರಿನಲ್ಲಿ ನೀಡಲಾಗುವ ತರಬೇತಿಗೆ ಅರ್ಜಿ ಕರೆಯಲಾಗಿದೆ.
ಪಿಯುಸಿ ಅಥವಾ ಪದವಿ ಪಡೆದ 18ರಿಂದ 35 ವರ್ಷ ವಯೋವಾನದವರು ಅರ್ಜಿ ಸಲ್ಲಿಸಬಹುದು. 2 ತಿಂಗಳ ಅವಧಿ. 500 ಹಾಗೂ ಹೊರಗಿನ ಅಭ್ಯರ್ಥಿಗಳಿಗೆ 1,500 ಶಿಷ್ಯ ವೇತನ ನೀಡಲಾಗುತ್ತದೆ.
ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಆಯಾ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪಡೆದು ಫೆ. 20ರೊಳಗೆ ಭರ್ತಿ ಮಾಡಿ ಸಲ್ಲಿಸಲು ಕೋರಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com