'ಉತ್ತಮ ಆರೋಗ್ಯದಿಂದ ಏಕಾಗ್ರತೆ'

Updated on: 

ಸಿಂಧನೂರು: ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಮತ್ತು ಹೆಣ್ಣು ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಎನ್ಪಿಇಜಿಇಎಲ್ ಕಾರ್ಯಕ್ರಮದಡಿ ಕಿಶೋರಿ ಜಾಗೃತಿ ತರಬೇತಿಯು ಹೆಣ್ಣು ಮಕ್ಕಳಲ್ಲಿ ಆತ್ಮಬಲವನ್ನು ಹೆಚ್ಚಿಸಲು ಹಾಗೂ ಉತ್ತಮ ಆರೋಗ್ಯವನ್ನು ಹೊಂದಿ ಏಕಾಗ್ರತೆಯನ್ನು ಸಾಧಿಸಲು ಸಹಕಾರಿಯಾಗಬಲ್ಲದು ಎಂದು ಸರ್ಕಾರಿ ಪ್ರೌಢಶಾಲಾ ಮುಖ್ಯಗುರು ವೀರನಗೌಡ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕನಕನಗರ ಸಿಆರ್ಸಿ ವ್ಯಾಪ್ತಿಯ ಕನಕನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯ ಎನ್ಪಿಇಜಿಇಎಲ್ ಕಾರ್ಯಕ್ರಮದಡಿ ಏರ್ಪಡಿಸಿದ್ದ ಮೂರು ದಿನಗಳ ಕಿಶೋರಿ- ಹದಿಹರೆಯದ ಹೆಣ್ಣು ಮಕ್ಕಳ ಜಾಗೃತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಕ್ತ ಮನಸ್ಸಿನಿಂದ ಚರ್ಚಿಸಿ: ಹೆಣ್ಣು ಮಕ್ಕಳಲ್ಲಿ ವೈಯಕ್ತಿಕ ಸ್ವಚ್ಛತೆ, ಆರೋಗ್ಯ ಸಂಬಂಧಿ ವಿಷಯಗಳು, ಮಕ್ಕಳ ಹಕ್ಕುಗಳು ಸೇರಿದಂತೆ ವಿವಿಧ ವಿಷಯಗಳನ್ನು ತಿಳಿಸಿಕೊಡಲು ಈ ತರಬೇತಿ ತುಂಬಾ ಅನುಕೂಲವಾಗಲಿದೆ. ವಿದ್ಯಾರ್ಥಿನಿಯರು ಯಾವುದೇ ವಿಷಯಗಳನ್ನು ಮುಚ್ಚಿಟ್ಟುಕೊಳ್ಳದೇ ಬಿಚ್ಚು ಮನಸ್ಸಿನಿಂದ ಶಾಲೆಯ ಶಿಕ್ಷಕಿಯರೊಂದಿಗೆ, ಪಾಲಕರೊಂದಿಗೆ ಚರ್ಚಿಸಬೇಕೆಂದು ಕಿವಿಮಾತು ಹೇಳಿದರು.
ಹೊಸಳ್ಳಿ ಇ.ಜೆ. ಸಿಆರ್ಪಿ ರಾಮದಾಸ ಮಾತನಾಡಿ, ಈ ಮೂರು ದಿನಗಳ ತರಬೇತಿ ಪಡೆದ ನಂತರ ನಿಮ್ಮಲ್ಲಿ ಹೊಸ ಚೈತನ್ಯ, ಉತ್ಸಾಹ, ಹುರುಪು ಮೂಡಿಸಿದೆ ಎಂದರು.
ಅಂಬಾಮಠ ಪ್ರೌಢಶಾಲೆಯ ಶಿಕ್ಷಕ ಮಲ್ಲಿಕಾರ್ಜುನ, ಶಾಲಾ ಮುಖ್ಯಗುರು ಶಂಷಾವಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಕನಕನಗರ ಸಿಆರ್ಪಿ ವೀರೇಶ ಗೋನವಾರ, ಖದ್ರಿಯಾ ಕಾಲೋನಿ ಸಿಆರ್ಪಿ ವಿರುಪಣ್ಣ, ಸಂಪನ್ಮೂಲ ಶಿಕ್ಷಕಿಯರಾದ ಫಹೀಮ್ ಬೇಗಂ, ಸೈರಾ ಬಾನು ಎಸ್. ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com