ವಿವಿಧ ಪಕ್ಷ, ಕಚೇರಿಯಲ್ಲಿ ಗಣರಾಜ್ಯೋತ್ಸವ

Updated on: 

ಯಾದಗಿರಿ: ಭಾರತದ ಸಂವಿಧಾನ ಸಾರ್ವಕಾಲಿಕ ಶ್ರೇಷ್ಠವಾದದ್ದು. ಎಲ್ಲಾ ಧರ್ಮದವರು ಶಾಂತಿ, ನೆಮ್ಮಯಿಂದ ಇದ್ದು, ಯುವಕರು ಶಕ್ತಿಯಾಗಿ ನಿಂತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ ಹೇಳಿದರು.
ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು. ಇಂದು ಎಲ್ಲರೂ ಶಾಂತಿ ಸಹೋದರತ್ವದಿಂದ ಬಾಳುವುದು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಹಿಸಲು ಆಗುತ್ತಿಲ್ಲ. ಮತಾಂಧರು ಧರ್ಮ- ಧರ್ಮಗಳಲ್ಲಿ ಅಶಾಂತಿಯನ್ನು ಉಂಟುಮಾಡಿ ದೇಶದ ಸುಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇಂಥವರ ಮಾತಿಗೆ ಬೆಲೆಕೊಡದೆ ಭಾರತದ ಏಳ್ಗೆಗೆ ತನು ಮನ ಧನದಿಂದ ಶಕ್ತಿಯಾಗಿ ನಿಲ್ಲಬೇಕೆಂದು ಕರೆ ನೀಡಿದರು.    ಪಕ್ಷದ ಮುಖಂಡರಾದ ಖಾಜಿ ಬಾಬಾ, ಅಬ್ದುಲ್ ಖಯ್ಸೂಂ, ಅಜೀಜ್ ಅಹ್ಮದ್ ಶಹ್ನಾ, ಸಲಿಂ ಗೋಗಿ, ಶರಣಗೌಡ ಯಡ್ಡಳ್ಳಿ, ಭೋಜಣ್ಣ ಗೌಡ, ಸೋಮನಗೌಡ, ಸೂರ್ಯಕಿರಣ, ಚೆನ್ನಪ್ಪಗೌಡ ಮೊಸಂಬಿ, ಎಸ್.ಪಿ.ನಾಡೇಕರ್, ಚಾಂದ್ ಸಾಬ್, ಸಲೀಮ್ ಪಟೇಲ್, ಯಾಕೂಬ್, ರಾಧಾಕೃಷ್ಣ, ಸಿದ್ದು ತಿಪ್ಪರೆಡ್ಡಿ, ಮೂರ್ತಿ ಅನಪುರ, ಸೋಮನಾಥ, ಶಿವಪ್ಪ, ಶರಣು, ಜೈರಾಬಿ ಬೇಗಂ, ಪದ್ಮಾವತಿ, ಬಸವರಾಜ ಚಂಡ್ರಿಕಿ, ನಗರ ಅಧಕ್ಷ ವಿಶ್ವನಾಥ ಶಿರವಾಳ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com