ಧ್ವಜ ವಂದನೆ

Updated on: 

ಅಫಜಲ್ಪುರ: ಪಟ್ಟಣದ ವಿವಿಧೆಡೆ 64ನೇ ಗಣರಾಜ್ಯೋತ್ಸವ ದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಯಿತು.
ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ರಾಜಾ ಪಟೇಲ್ ವಡಗೇರಿ ಧ್ವಜಾರೋಹಣ ನೆರವೇರಿಸಿದರು. ತಾಪಂ ಕಚೇರಿಯಲ್ಲಿ ತಾಪಂ ಅಧ್ಯಕ್ಷೆ ಶಾರದಬಾಯಿ ಗಂಡೋಳಿ, ಧ್ವಜಾರೋಹಣ ನೆರವೇರಿಸಿದರು.  ತಾಪಂ ಅಧಿಕಾರಿ ಶಿವಶರಣಪ್ಪ ನಂದರಗಿ, ಮಾಜಿ ಶಾಸಕ ಎಂ.ವೈ. ಪಾಟೀಲ್, ತಾಪಂ ಸದಸ್ಯರು ಇದ್ದರು. ಕೃಷಿ ಇಲಾಖೆಯಲ್ಲಿ ಕೃಷಿ ಅಧಿಕಾರಿ ಈಶ್ವರ ಬಾಡಗಿ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಚಿತ್ರಶೇಖರ ದೇಗಲಮಡಿ ಧ್ವಜಾರೋಹಣ ನೆರವೇರಿಸಿದರು. ಪಟ್ಟಣ ಪಂಚಾಯತ್ದಲ್ಲಿ ಅಧ್ಯಕ್ಷ ಮಳೆಪ್ಪ ಮನಮಿ ಧ್ವಜಾರೋಹಣ ನೆರವೇರಿಸಿದರು. ಮಹಾಂತೇಶ್ವರ ವಿದ್ಯಾವರ್ಧಕ ಸಂಘದಲ್ಲಿ ಸಂಸ್ಥೆಯ   ಎಂ.ವೈ. ಪಾಟೀಲ್ ಧ್ವಜಾರೋಹಣ ನೆರವೇರಿಸಿದರು.  ಠಾಣೆಯಲ್ಲಿ ಸಿಪಿಐ ಕೆ. ರಾಜೇಂದ್ರ ಧ್ವಜಾರೋಹಣ ನೆರವೇರಿಸಿದರು. ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿ ಇದ್ದರು. ಲೋಕೋಪಯೋಗಿ  ಅಧಿಕಾರಿ ಮಹಾದೇವ ಸಿಂಧೆ ಧ್ವಜಾರೋಹಣ ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com