ಸಿಂಧನೂರು: ಜಾತಿ ವ್ಯವಸ್ಥೆ ತಾಂಡವವಾಡುತ್ತಿರುವ ಪ್ರಸ್ತುತ ದಿನಗಳಲ್ಲಿ ಸಮಾನತೆ ಬೆಳೆಯಬೇಕಾದರೆ ಪ್ರಜಾತಂತ್ರ ವ್ಯವಸ್ಥೆ ಗಟ್ಟಿಯಾಗಬೇಕಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶಪ್ರೇಮ ಮೂಡಲಿ: ಉಪನ್ಯಾಸಕಿ ಡಾ. ಮಧುಮತಿ ದೇಶಪಾಂಡೆ ಮಾತನಾಡಿ, ಸಾಮಾಜಿಕ ವ್ಯವಸ್ಥೆ ಸಂವಿಧಾನದ ಬದ್ದತೆಯಲ್ಲಿ ನಿರ್ಮಾಣವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯು ಗಟ್ಟಿಕೊಳ್ಳಬೇಕಾದರೆ ಯುವಕರಲ್ಲಿ ದೇಶಪ್ರೇಮ, ಐಕ್ಯತೆ, ಪ್ರೇಮ, ಭಾವೈಕ್ಯತೆ ಮೂಡಿಸಿಕೊಳ್ಳಬೇಕಿದೆ ಎಂದರು. ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಎಂ. ಚಂದ್ರಶೇಖರ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್. ಶಿವನಗೌಡ ಗೊರೇಬಾಳ, ತಾ.ಪಂ. ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ, ಉಪಾಧ್ಯಕ್ಷ ರಾಮಪ್ಪ ಹುಡಾ, ನಗರಸಭೆ ಉಪಾಧ್ಯಕ್ಷ ಎಂ.ಡಿ. ನದೀಮುಲ್ಲಾ, ಸದಸ್ಯರಾದ ಶೈಲಜಾ ಷಡಕ್ಷರಪ್ಪ, ಸುರೇಶ ಜಾಧವ್, ಮದರ್ ಹುಸೇನ್, ಮಹೆಬೂಬ್, ನಗರಸಭೆ ಪೌರಾಯುಕ್ತ ನಾಸೀರ್ ಅಲಿ, ಸಮಾಜ ಕಲ್ಯಾಣ ಅಧಿಕಾರಿ ಕೆ.ನಾಗರಾಜ, ಶಿಕ್ಷಣಾಧಿಕಾರಿ ವೃಷಭೇಂದ್ರಯ್ಯ, ಡಿವೈಎಸ್ಪಿ ವೀರೇಶ ಬೆಳವಾಡಿ ಮತ್ತಿತರರು ಭಾಗವಹಿಸಿದ್ದರು.