ಮುದಗಲ್: ಸ್ಥಳೀಯ ಪ.ಪಂ. ಕಾರ್ಯಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಮತದಾರರ ದಿನಾಚಾರಣೆ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಪ.ಪಂ.ಅಧ್ಯಕ್ಷೆ ಶರಣಮ್ಮ ಪಂಪಯ್ಯಮಠ ಮತದಾರರಿಗೆ ನೂತನ ಮತದಾರರ ಚೀಟಿ ವಿತರಣೆಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯಧಿಕಾರಿ ಎಂ. ವಿಜಯಲಕ್ಷ್ಮೀ ಮಾತನಾಡಿದರು. ಬಿಎಲ್ಒ ಸುಭಾಷ್, ನೈರ್ಮಲ್ಯಧಿಕಾರಿ ಜಿಲಾನಿ ಪಾಶಾ, ಪ.ಪಂ. ಸಿಬ್ಬಂದಿ ವೆಂಕಟೇಶ, ಬಸವರಾಜ ಇದ್ದರು.