ಸಿಂಧನೂರು: ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಬುಧವಾರ ಎಚ್ಕೆಡಿಬಿ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಬಸ್ ಶೆಲ್ಟರ್ಅನ್ನು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಉದ್ಘಾಟಿಸಿದರು. ಅದೇ ರೀತಿ ಗ್ರಾಮದಲ್ಲಿ 4 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಬಪ್ಪೂರ ಗ್ರಾಮದಲ್ಲಿ ಪಿಡಬ್ಲ್ಯೂಡಿ ಅನುದಾನದಲ್ಲಿ 4 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ತಾಲೂಕು ಅಧ್ಯಕ್ಷ ಅಮರೇಗೌಡ ವಿರುಪಾಪುರ, ಮುಖಂಡ ಈಶಪ್ಪ ಸಾಹುಕಾರ, ರೈತಮೋರ್ಚಾ ಅಧ್ಯಕ್ಷ ಬಸವರಾಜ ಸಿಂಧನೂರು, ಮುಖಂಡ ಬಸವರಾಜಸ್ವಾಮಿ ಹಸಮಕಲ್, ಬಿಜೆಪಿ ಮಸ್ಕಿ ಘಟಕದ ಪ್ರಧಾನ ಕಾರ್ಯದರ್ಶಿ ಅಮರೇಶ ಗಚ್ಚಿನಮನಿ, ಬಸವರಾಜ ಪಗಡದಿನ್ನಿ, ನಾಗಪ್ಪ ಕಾನಿಹಾಳ, ಅಮರೇಗೌಡ ಚೆನ್ನಳ್ಳಿ, ಬಸಯ್ಯಸ್ವಾಮಿ, ಕೆರೇಗೌಡ, ಮರಿಸ್ವಾಮಿ, ಸೂಗೂರಪ್ಪ ಇದ್ದರು.
ರಸಪ್ರಶ್ನೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ಸಿಂಧನೂರು: ತಾಲೂಕಿನ ಜವಳಗೇರಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವನಿತಾ ಮತ್ತು ತಂಡದವರು ಜ.27, 28ರಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿದ್ಯಾರ್ಥಿ- ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಸಪ್ರಶ್ನೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮಾರ್ಗದರ್ಶಕ ಗಿರೀಶ, ಮುಖ್ಯೋಪಾಧ್ಯಾಯಿನಿ ಅನುಪಮ ಕುಲಕರ್ಣಿ, ಎಸ್ಡಿಎಂಸಿ ಸದಸ್ಯರು, ಹಿರಿಯ ಶಿಕ್ಷಕರಾದ ಹನುಮಂತಪ್ಪ, ಅಡಿವೆಮ್ಮ, ಕಾಂತರಾಜ, ಉಮಾದೇವಿ, ಗೀತಾಲಕ್ಷ್ಮೀ, ಮಹಾದೇವಿ, ಅನ್ನಮ್ಮ, ಅನಿಸ್ ಫಾತೀಮಾ, ಖಾಸಿಂ ಅಲಿ ಅಭಿನಂದಿಸಿದ್ದಾರೆ.