ರಾಯಚೂರು: ಸಿಂಧನೂರು ತಾಲೂಕಿನ ಜವಳಗೇರಾ ಗ್ರಾಮದಲ್ಲಿ ಹಳೆಯ ವೈಷಮ್ಯದಿಂದ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದೆ. ಮೃತನನ್ನು ದ್ಯಾವಣ್ಣ ಎಂದು ಗುರುತಿಸಲಾಗಿದೆ.
ಈತ ಮನೆಯಲ್ಲಿದ್ದಾಗ ಹಳೆಯ ದ್ವೇಷದಿಂದ ಚಂದ್ರಶೇಖರ ಮತ್ತು ಹನುಮಂತ ಎಂಬುವವರು ದ್ಯಾವಣ್ಣನ ತಲೆ ಹಾಗೂ ಕುತ್ತಿಗೆ ಹಿಂಭಾಗದಲ್ಲಿ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾರೆಂದು ಪೊಲೀಸರಿಗೆ ದೂರಲಾಗಿದೆ.
ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಹಲ್ಲೆ: ಮಹಿಳೆ ಸಾವು
ರಾಯಚೂರು: ತಾಲೂಕಿನ ಯಾಪಲದಿನ್ನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳಿಗೆ ವ್ಯಕ್ತಿಯೊಬ್ಬ ಹೊಡೆದಿದ್ದರಿಂದ ಆಕೆ ಸಾವಿಗೀಡಾಗಿದ್ದಾಳೆ. ಮೃತಳನ್ನು ಪದ್ಮಮ್ಮ ಎಂದು ಗುರುತಿಸಲಾಗಿದೆ.
ಕಟ್ಟಿಗೆ ವಿಷಯಕ್ಕೆ ಜಗಳ ತೆಗೆದ ಸಂಬಂಧಿ ಮೌಲಪ್ಪ ಎಂಬಾತ ಮಹಿಳೆಯ ಕೆನ್ನೆಗೆ ಬಲವಾಗಿ ಹೊಡೆದು ತಳ್ಳಿದ್ದರಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಯಿತು. ಪರಿಣಾಮ ಆಕೆ ಸಾವಿಗೀಡಾಗಿದ್ದಾಳೆಂದು ಪೊಲೀಸರಿಗೆ ದೂರಲಾಗಿದೆ.
ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.