3ರಂದು ಕಾರ್ಯಾಗಾರ

Updated on: 

ರಾಯಚೂರು: ಧಾರವಾಡದ ವಿಜಯಿ- ಕರ್ನಾಟಕ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಫೆ. 3ರಂದು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ. ಅಂದು ನಗರದ ಐಎಂಎ ಸಭಾಂಗಣದಲ್ಲಿ ಬೆಳಗ್ಗೆ 8.30ಕ್ಕೆ ಕಾರ್ಯಾಗಾರದ ಉದ್ಘಾಟನೆ ತ್ರಿವಿಕ್ರಮ್ ಜೋಷಿ ನೆರವೇರಿಸುವರು. ಖ್ಯಾತ ನರರೋಗ ತಜ್ಞ ಡಾ. ಬಸನಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಗುತ್ತದೆ.
 ಅಧ್ಯಕ್ಷತೆಯನ್ನು ಎಸ್‌ಕೆಇಎಸ್ ಟ್ರಸ್ಟ್ ಗೌರವಾಧ್ಯಕ್ಷ ಬಸವರಾಜ ಕಳಸ ವಹಿಸುವರು. ಪಿಯು  ವಿಜ್ಞಾನ  ವಿದ್ಯಾರ್ಥಿಗಳಿಗೆ ಹಾಗೂ ಐಎಸ್‌ಇಇಟಿ, ಎನ್‌ಇಇಟಿ, ಕಾಮೆಡ್-ಕೆ ಪರೀಕ್ಷೆ ಎದುರಿಸುವ ಬಗ್ಗೆ  ತಜ್ಞ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ.

'ವಿಶ್ವರೂಪಂ' ಆರಂಭ
ರಾಯಚೂರು: ಕಮಲ್ ಹಾಸನ್ ಅಭಿನಯದ ವಿವಾದಿತ ಚಿತ್ರ ವಿಶ್ವರೂಪಂ ನಗರದಲ್ಲಿ ಗುರುವಾರ ಬಿಡುಗಡೆಗೊಂಡು ಪ್ರದರ್ಶನ ಕಾಣುತ್ತಿದೆ.
 ಕೆಲ ದಿನಗಳ ಹಿಂದೆ ನಗರದ ಎಸ್‌ಎನ್‌ಟಿ ಚಿತ್ರಮಂದಿರದಲ್ಲಿ ವಿಶ್ವರೂಪಂ ಚಿತ್ರ ಬಿಡುಗಡೆಯಾಗಿತ್ತು. ಆದರೆ ಆ ವೇಳೆ ಯುವಕರ ಗುಂಪೊಂದು ಚಿತ್ರದ ಪೋಸ್ಟರ್ ಹರಿದು ಆಕ್ರೋಶ ವ್ಯಕ್ತಪಡಿಸಿದ್ದರಿಂದ ನ್ಯಾಯಾಲಯದ ಆದೇಶ ಹೊರಬೀಳುವವರೆಗೆ ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿತ್ತು.
 ಆದರೆ ಗುರುವಾರದಿಂದ ವಿಶ್ವರೂಪಂ ನಗರದ ಎಸ್‌ಎನ್‌ಟಿ ಚಿತ್ರಮಂದಿರದಲ್ಲಿ ಪ್ರದರ್ಶನ ಪುನಾರಂಭವಾಗಿದ್ದು, ಕಮಲ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

5ರಂದು ಸನ್ಮಾನ
ರಾಯಚೂರು: ನಗರದಲ್ಲಿ ಫೆ.5ರಂದು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಗಸ್ತಿಯವರನ್ನು ಸನ್ಮಾನಿಸಲು ರಾಜ್ಯ ಸವಿತಾ ಸಮಾಜದ ನಗರ ಮತ್ತು ಗ್ರಾಮಾಂತರ ಘಟಕ ನಿರ್ಧರಿಸಿದೆ.
  ನಗರದಲ್ಲಿ ಸವಿತಾ ಸಮಾಜದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಫೆ.5ರಂದು ಅಶೋಕ ಗಸ್ತಿ ಅವರನ್ನು ನಗರದ ಐಎಂಎ ಸಭಾಂಗಣದಲ್ಲಿ ಸನ್ಮಾನಿಸುವುದು, ಸಮಾರಂಭಕ್ಕೆ ಸಮಾಜದ ರಾಜ್ಯಾಧ್ಯಕ್ಷ ಎನ್.ಸಂಪತ್ ಕುಮಾರ್ ಅವರನ್ನು ಆಹ್ವಾನಿಸಲು ಒಪ್ಪಿಗೆ ಸೂಚಿಸಲಾಯಿತು.   ವಿ. ಗೋವಿಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಶಿವಯ್ಯ,ಇಡಪನೂರು ಆಂಜಿನೇಯ್ಯ, ಎಂ. ಬಸವರಾಜ್, ಭೀಮಣ್ಣ ಮತ್ತಿತರರು ಪಾಲ್ಗೊಂಡಿದ್ದರೆಂದು ಪ್ರಕಟಣೆ ತಿಳಿಸಿದೆ.

ಪತ್ರಿಕೆಗಳು ಸಮಸ್ಯೆಗಳಿಗೆ ಸ್ಪಂದಿಸುತ್ತವೆ
ಲಿಂಗಸ್ಗೂರು: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಗುರುತಿಸಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸುತ್ತಿವೆ ಎಂದು ಬಿಎಸ್ಸಾರ್ ಕಾಂಗ್ರೆಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಸಿದ್ಧು ಬಂಡಿ ಅಭಿಪ್ರಾಯಪಟ್ಟರು.
ಪಟ್ಟಣದ ಗುರುಭವನದಲ್ಲಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಸಂಜೆ ಹಮ್ಮಿಕೊಂಡಿದ್ದ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಾಗಾರವನ್ನು ಹುನಕುಂಟಿ ಶರಣಯ್ಯ ತಾತಾ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಸಂಘದ ರಾಜ್ಯಾಧ್ಯಕ್ಷ ಟಿಪ್ಪುವರ್ಧನ, ತಾಲೂಕಾಧ್ಯಕ್ಷ ಶಾಮೀದಲಿ ಕರಡಕಲ್, ಕುಪ್ಪಣ್ಣ ಮಾಣಿಕ್ ವಕೀಲರು, ಪತ್ರಕರ್ತ ಜಲಾಲುದ್ದೀನ್, ಖಾದರಸಾಬ ಆನೆಹೊಸೂರು, ಬಸವರಾಜ ಮ್ಯಾಗೇರಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com