ಸಾಲದ ಪಡೆದು ಸ್ವಾವಲಂಬಿ ಬದುಕು ನಡೆಸಿ

Updated on

ಸಿಂಧನೂರು: ಮಹಿಳೆಯರು ಇಂದಿನ ದಿನಮಾನದಲ್ಲಿ ಸ್ವಸಹಾಯ ಸಂಘಗಳಲ್ಲಿ ಸಾಲ ಸೌಲಭ್ಯ ಪಡೆದು ಸ್ವಾವಲಂಬಿ ಬದುಕು ನಡೆಸಲಿದ್ದಾರೆ ಎಂದು ಲಿಂಗನಗೌಡ ಪಾಟೀಲ್ ಕೊಟ್ನೇಕಲ್ ಅಭಿಪ್ರಾಯಪಟ್ಟರು. ಆರ್‌ಡಿಸಿಸಿ ಬ್ಯಾಂಕ್ ಶಾಖೆ ಮತ್ತು ವಿಜಯ ಮಹಿಳಾ ಮಹಾ ಒಕ್ಕೂಟ ಸಿಂಧನೂರು ಸಂಯುಕ್ತಾಶ್ರಯದಲ್ಲಿ ನಡೆದ ಸ್ವಶಕ್ತಿ ಮಹಿಳಾ ಸ್ವಸಹಾಯ ಸಂಘಗಳಲ್ಲಿ 6,40,000 ಸಾಲ ವಿತರಿಸಿ ಮಾತನಾಡಿದರು. ಇಂದು ಮಹಿಳೆ ಸ್ವಸಹಾಯ ಸಂಘದ ಮೂಲಕ ಸಾಲ ಪಡೆದು ಸಾಕಷ್ಟು ಅಭಿವೃದ್ಧಿಪರ ಕಾಳಜಿವಹಿಸಿ ಹಣವನ್ನು ಸದ್ಬಳಕೆ ಮಾಡಿಕೊಂಡು ಸಮಾಜಮುಖಿಯಾಗಿದ್ದಾರೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸ್ವಸಹಾಯ ಸಂಘಗಳ ಸಹಕಾರ ಪಡೆದುಕೊಳ್ಳಬಹುದು ಎಂದು ಮನವರಿಕೆ ಮಾಡಿದರು. ಇದೇ ವೇಳೆ ಗಂಗಮ್ಮ, ಓಬಳಮ್ಮ, ಸುಜಾತ, ಮಾರೆಮ್ಮ, ಮಹಾದೇವಮ್ಮ, ದುರಗಯ್ಯ ನಾಯಕ ದೊಡ್ಡಮನಿ, ಅಮರಯ್ಯ ತಾತಾ, ರಾಜಶೇಖರ ಭಾಗವಹಿಸಿದ್ದರು. ಕಾರ್ಯದರ್ಶಿ ಗಂಗಾಧರ ಕನ್ನಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಚನ್ನಮ್ಮ ವಂದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com