ಎಪಿಎಂಸಿ ಹಮಾಲರ ಧರಣಿ

Updated on: 

ಸಿಂಧನೂರು: ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಮಾಲರ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಆರಂಭವಾಯಿತು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಹಮಾಲರ ಸಂಘದ ಅಧ್ಯಕ್ಷ ಬಾಷುಮಿಯಾ, ಹಮಾಲರ ಸಂಘದ ನ್ಯಾಯಯುತವಾದ ಬೇಡಿಕೆಗಳ ಈಡೇರಿಗಾಗಿ ಹಮ್ಮಿಕೊಂಡಿರುವ ಧರಣಿಗೆ ಸಂಬಂಧಪಟ್ಟವರು ಸ್ಪಂದಿಸುವವರೆಗೆ ಮುಂದುವರೆಯುತ್ತದೆ. ಈಗಾಗಲೇ ಅನೇಕ ಬಾರಿ ಮಾಡಿದ ಪ್ರತಿಭಟನೆಗಳಲ್ಲಿ ನೀಡಿರುವ ಭರವಸೆಗಳು ಹುಸಿಯಾಗಿವೆ. ಎಪಿಎಂಸಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಹಮಾಲರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಲು ಆಡಳಿತ ವರ್ಗ ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸಲಾಪುರ(ಡಿ) ಸರ್ವೆ ನಂ.9/1ರಲ್ಲಿ ಈಗಾಗಲೇ 127 ನಿವೇಶನಗಳನ್ನು ರಚಿಸಿ ನಿರ್ದೇಶಕರು ಫಲಾನುಭವಿಗಳಿಗೆ ಹಂಚುವುದಕ್ಕೆ ಅನುಮತಿ ಕೊಟ್ಟಿದ್ದಾರೆ. ಆದರೂ 2 ವರ್ಷಗಳಿಂದ ಸ್ಥಳೀಯ ಆಡಳಿತ ವರ್ಗ ಮತ್ತು ಆಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದರು.
ಬೇಡಿಕೆಗಳು: ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಬೇಕು. ರಾಜೀವ್‌ಗಾಂಧಿ ಅಥವಾ ವಾಜಪೇಯಿ ವಸತಿ ಯೋಜನೆಯಲ್ಲಿ ಮನೆಗಳನ್ನು ನಿರ್ಮಾಣ ಮಾಡಬೇಕು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಗಂಜ್ ಗ್ರಾಮಾಂತರ ಹಮಾಲರಿಗೂ ಶೀಘ್ರ ನಿವೇಶನ ಹಂಚಬೇಕು. ಹಮಾಲರಿಗೆ ಕಟ್ಟಿದ ಶ್ರಮಿಕ ಭವನವನ್ನು ದುರಸ್ತಿ ಮಾಡಿ ಶ್ರಮಿಕರಿಗೆ ಉಪಯೋಗಿಸಲು ಅನುಕೂಲ ಮಾಡಿಕೊಡಬೇಕೆಂಬುದು ಸೇರಿದಂತೆ ನಾನಾ ಬೇಡಿಕೆಗಳ ಮನವಿ ಪತ್ರವನ್ನು ಎಪಿಎಂಸಿ ಅಧ್ಯಕ್ಷ ಸಣ್ಣಕರಿಯಪ್ಪ, ಕಾರ್ಯದರ್ಶಿಗಳಿಗೆ ಮುಖಂಡರು ಸಲ್ಲಿಸಿದರು.
ಹಮಾಲರ ಸಂಘದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಸಹ ಕಾರ್ಯದರ್ಶಿಗಳಾದ ಅಲ್ಲಾವಲಿ, ಅಮರೇಶ ನಾಯಕ, ಉಪಾಧ್ಯಕ್ಷ ಭಾಷಾಸಾಬ ಕಿಡದೂರು, ಖಜಾಂಚಿ ಮೊಯಿನುದ್ದೀನ್, ಸಹ ಖಜಾಂಚಿ ಹನುಮಂತಪ್ಪ ಹಂಚಿನಾಳ, ದಾವಲಸಾಬ್‌ಗಂಜ್ ಮಹಿಳಾ ಹಮಾಲರ ಸಂಘದ ಅಧ್ಯಕ್ಷೆ ಶಾಂತಮ್ಮ ಕಾರ್ಯದರ್ಶಿ ನಾಗಮ್ಮ ಕಟ್ಟಿಮನಿ ಭಾಗವಹಿಸಿದ್ದರು.
  ಅನಿರ್ದಿಷ್ಟಾವಧಿ ಧರಣಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ, ಎಐಎಸ್‌ಎಫ್‌ನ ಹನುಮೇಶ, ಬಸವರಾಜ ಮತ್ತಿತರರು ಧರಣಿಗೆ ಬೆಂಬಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com