ಹಮಾಲರ ಧರಣಿ ಏಳನೇ ದಿನಕ್ಕೆ

Updated on: 

ಸಿಂಧನೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಮಾಲರ ಸಂಘದ ವತಿಯಿಂದ ಎಪಿಎಂಸಿ ಕಚೇರಿ ಎದುರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಹಮಾಲರ ಸಂಘದ ಎಐಟಿಯುಸಿ ಸಲಹಾ ಸಮಿತಿ ಸದಸ್ಯ ದುರಗಪ್ಪ ಗುಮಗೇರಿ, ಹಮಾಲರ ಸಂಘದ ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಮ್ಮಿಕೊಂಡಿರುವ ಧರಣಿ ಸಂಬಂಧಪಟ್ಟವರ ಸ್ಪಂದಿಸುವವರೆಗೂ ಮುಂದುವರೆಯುತ್ತದೆ. ಅನೇಕ ಬಾರಿ ಮಾಡಿದ ಪ್ರತಿಭಟನೆಗಳಲ್ಲಿ ನೀಡಿರುವ ಭರವಸೆಗಳು ಭರವಸೆಯಾಗಿಯೇ ಉಳಿದಿವೆ ಎಂದರು. ಸಂಗಯ್ಯಸ್ವಾಮಿ, ಕಾಳಮ್ಮ, ಶಾಂತಪ್ಪ ಮಳ್ಳಿ ಧರಣಿ ನಿರತರಿಗೆ ಬೆಂಬಲ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com