ಸಿಂಧನೂರು: ತಾಲೂಕಿನ ತುರ್ವಿಹಾಳ ಗ್ರಾಮದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಟೀಕಾರಾಯರ(ಜಯತೀರ್ಥರು) ಪಂಚಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಗುರು ರಾಯರಿಗೆ ಹಾಗೂ ಟೀಕಾರಾಯರಿಗೆ ಪಂಚಾಮೃತ, ಅಲಂಕಾರ, ಅಷ್ಟೋತ್ತರ, ವಿಶೇಷ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಇದೇ ಸಂದರ್ಭದಲ್ಲಿ ಸುಷ್ಮಾ ಜೋಷಿರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಶೇಷಗಿರಿರಾವ್ ಕುಲಕರ್ಣಿ, ಅನಂತರಾವ್ ಧಡೇಸೂಗುರ, ಭೋಗೇಶಾಚಾರ್ಯ ನವಲಿ, ಹುಲಿ ಹೈದರ್ ತಿರುಪತಿ ಆಚಾರ್ಯ, ಮಠಾಧಿಕಾರಿ ವೆಂಕಟಗಿರಿ ದಾಸ ಇದ್ದರು. ವಿಜಯಲಕ್ಷ್ಮೀ ಭಂಡಾರಿ ಅನ್ನ ಸಂತರ್ಪಣೆ ವ್ಯವಸ್ಥೆ ಕಲ್ಪಿಸಿದ್ದರು.