ಯಾದಗಿರಿ: ಜಿಲ್ಲಾ ವೀರಶೈವ ಸಮಾಜದ ಸಭೆ ಇತ್ತೀಚೆಗೆ ಕಚೇರಿಯಲ್ಲಿ ನಡೆಯಿತು. ವೀರಶೈವ ಸಮಾಜ ಮತ್ತು ವೀರಶೈವ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ ಪವಿತ್ರ ಶ್ರಾವಣ ಮಾಸದ ಪ್ರತಿ ಸೋಮವಾರ ವೀರಶೈವ ಕಲ್ಯಾಣಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ನಗರ ಘಟಕ ಅಧ್ಯಕ್ಷ ಅಯ್ಯಣ್ಣ ಹೊಂಡೇಕಾರ್ ತಿಳಿಸಿದ್ದಾರೆ. ವಿಶೇಷ ಉಪನ್ಯಾಸಕರಿಂದ ಉಪನ್ಯಾಸ, ವಿಶೇಷ ಪೂಜೆ, ಮತ್ತು ವಿವಿಧ ಸರ್ಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ನೌಕರರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ನೌಕರರ ಸಂಘದ ಮಾಜಿ ಅಧ್ಯಕ್ಷ ರಾಚೋಟಿ ಸ್ವಾಮಿ, ಕೂಡ್ಲಪ್ಪ ಗೌಡ, ಶಶಿಕಾಂತ ಕಲಶೆಟ್ಟಿ, ಮಹಿಪಾಲರಡ್ಡಿ, ಸೂಗಪ್ಪ ಪಾಟೀಲ, ಬಸವರಾಜ ಯಡ್ಡಳ್ಳಿ, ಬನ್ನಪ್ಪ ಇದ್ದರು.