ಸಿಂಧನೂರು: ಅರಳು ಮರಳಾಗದೆ ಎಲ್ಲರೂ ಮರಳಿ ಅರಳಿ ಎಂದು ಮಕ್ಕಳ ವೈದ್ಯ ಹಾಗೂ ಸಹನಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ. ಕೆ. ಶಿವರಾಜ್ ಹಿರಿಯ ನಾಗರಿಕರಿಗೆ ಕರೆ ನೀಡಿದರು. ಸಹನಾ ಮಾಂಟೆಸರಿ ಶಾಲೆಯಲ್ಲಿ ಏರ್ಪಡಿಸಿದ್ದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಅಜ್ಜ-ಅಜ್ಜಿಯರ ದಿನ ಹಾಗೂ ಉಚಿತ ಎಲುಬಿನ ಸಾಂಧ್ರತೆ ಪರೀಕ್ಷೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲುಬಿನ ಸಾಂಧ್ರತೆ ಪರೀಕ್ಷೆ ನಡೆಸಿದ ಎಲುಬು ತಜ್ಞ ಡಾ. ಹರ್ಷವರ್ಧನ್ ಪಾಟೀಲ್ಮಾತನಾಡಿದರು. ಪೋಷಕರು ಶಿಬಿರದಲ್ಲಿ ಎಲುಬಿನ ಸಾಂದ್ರತೆ ಪರೀಕ್ಷೆ ಮಾಡಿಸಿಕೊಂಡರು. ಮಕ್ಕಳ ಅಜ್ಜ-ಅಜ್ಜಿಯಂದಿರಿಗಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಶ್ವಸ್ಥೆ ಜ್ಯೋತಿ ಶಿವರಾಜ್, ಹಿರಿಯ ನಿವೃತ್ತ ಸ.ಕಾ. ಎಂಜಿನಿಯರ್ ಗೋವಿಂದ ರಡ್ಡಿ ಹಾಗೂ ಪ್ರಾಂಶುಪಾಲ ಆರ್. ದತ್ತಾತ್ರೇಯ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಸ್ವಾಗತ ನೃತ್ಯ ಪ್ರದರ್ಶಿಸಿದರು.