ರಾಯಚೂರು: ನಗರದ ಉರುಕುಂದಿ ಈರಣ್ಣಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ.25ರ ವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉರುಕುಂದಾ ಈರಣ್ಣ ಸಾಂಸ್ಕೃತಿಕ ಸಾಹಿತ್ಯಿಕ ಕಲಾ ಸಂಘ ತಿಳಿಸಿದೆ. ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜು.28ರಂದು ಮೊದಲನೇ ಶ್ರಾವಣ ಸೋಮವಾರದ ಅಂಗವಾಗಿ ಲಕ್ಷ್ಮಿ ನರಸಿಂಹ ಸ್ವಾಮಿಯವರ ಕಲ್ಯಾಣೋತ್ಸವ ಬೆಳಗ್ಗೆ ನಡೆಯಲಿದೆ. ಸಂಜೆ 5ಕ್ಕೆ ಕರಿಯಪ್ಪ ಮಾಸ್ತರ್ ಅವರಿಂದ ನವರಸ ವೈಭವ ಗಮಕ ಕಾರ್ಯಕ್ರಮ ಆಯೋಜಿಸಲಾಗಿದೆ. ಆ.4ರಂದು ಎರಡನೇ ಸೋಮವಾರ ವಚನ ಗಾಯನ ಕಾರ್ಯಕ್ರಮ, ಆ.11ರಂದು ಮೂರನೇ ಸೋಮವಾರ ಪ್ರಭುಲಿಂಗ ಲೀಲೆ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದೆ. ಅದೇ ರೀತಿ ಆ.18ರಂದು ಶ್ರಾವಣದ ನಾಲ್ಕನೇ ಸೋಮವಾರದಂದು ಶಿವಕರುಣೆ ಗಮಕ ವಾಚನ ಆಯೋಜಿಸಿದ್ದು, ಆ.24ರಂದು ಸಂಜೆ 5ಕ್ಕೆ ರಥೋತ್ಸವ ಆಯೋಜಿಸಲಾಗಿದೆ ಎಂದು ಸಂಘ ತಿಳಿಸಿದೆ